ಕೊಲ್ಲಂ : ಚೆನ್ನೈನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿದ್ಯಾರ್ಥಿನಿ ಫಾತಿಮಾ ಲತೀಫ್ ಅಸಹಜ ಸಾವಿನ ಕುರಿತು ಕೇಂದ್ರ ತನಿಖಾ ದಳ (ಸಿಬಿಐ) ತನಿಖೆ ಪ್ರಾರಂಭಿಸಿದೆ.
ಕೊಲ್ಲಂನ ಫಾತಿಮಾ ಲತೀಫ್ ಮನೆಗೆ ಸಿಬಿಐ ತಂಡ ಭೇಟಿ :
ಚೆನ್ನೈನ ಸಿಬಿಐ ತನಿಖಾ ತಂಡವು ಕೇರಳದ ಕೊಲ್ಲಂ ಜಿಲ್ಲೆಯಲ್ಲಿರುವ ಫಾತಿಮಾ ಮನೆಗೆ ಆಗಮಿಸಿ, ಪೋಷಕರು ಮತ್ತು ಸಂಬಂಧಿಕರ ಹೇಳಿಕೆಗಳನ್ನು ದಾಖಲಿಸಿದೆ. ಮೊದಲೇ ಮಾಹಿತಿ ನೀಡಿದಂತೆ, ಸಿಬಿಐ ತಂಡ ಶುಕ್ರವಾರ ಬೆಳಗ್ಗೆ 10 ಗಂಟೆಗೆ ಫಾತಿಮಾ ಮನೆಗೆ ಆಗಮಿಸಿ, ಮನೆಯವರ ಹೇಳಿಕೆಗಳನ್ನು ಪಡೆದುಕೊಂಡಿದೆ. ಸಿಬಿಐ ತಂಡ ಮುಂದಿನ ಕೆಲ ದಿನಗಳವರೆಗೆ ಕೊಲ್ಲಂನಲ್ಲಿ ಇರಲಿದೆ.
ಇದನ್ನೂ ಓದಿ : ಐಐಟಿ ಟಾಪರ್ ಫಾತಿಮಾ ಲತೀಫ್ ಸಾವಿನ ಪ್ರಕರಣ ಸಿಬಿಐಗೆ ಹಸ್ತಾಂತರ!
ಐಐಟಿ ವಿದ್ಯಾರ್ಥಿನಿ ಫಾತಿಮಾ ಲತೀಫ್, 9 ನವೆಂಬರ್ 2019 ರಂದು ಚೆನ್ನೈನ ಹಾಸ್ಟೆಲ್ ಕೊಠಡಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಬಳಿಕ ಪ್ರಾಥಮಿಕ ತನಿಖೆಯಲ್ಲಿ ಫಾತಿಮಾ ಸಾವಿಗೆ ಆಕೆಯ ಶಿಕ್ಷಕ ಕಾರಣ ಎಂಬ ಮಾಹಿತಿ ಆಕೆಯ ಮೊಬೈಲ್ನಲ್ಲಿ ಸಿಕ್ಕಿದ ಮಾಹಿತಿಯಿಂದ ಬಯಲಾಗಿತ್ತು. ಶಿಕ್ಷಕ ಸುದರ್ಶನ್ ಪದ್ಮನಾಭನ್ ಎಂಬಾತನ ಹೆಸರು ಫಾತಿಮಾ ಸಾವಿನ ಹಿಂದೆ ಕೇಳಿ ಬಂದಿತ್ತು. ಫಾತಿಮಾ ಸಾವಿನ ವಿರುದ್ಧ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ, ಸರ್ಕಾರ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು.
ಇದನ್ನೂ ಓದಿ : ಲೈಂಗಿಕ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾದಳಾ ಐಐಟಿ ವಿದ್ಯಾರ್ಥಿನಿ