ಕರ್ನಾಟಕ

karnataka

ETV Bharat / bharat

ಕ್ಯಾನ್ಸರ್​ ಚಿಕಿತ್ಸೆಯಲ್ಲಿ ಪ್ರಗತಿ ಸಾಧಿಸಿದ ಐಐಟಿ ಮದ್ರಾಸ್ ಸಂಶೋಧಕರು

ಕ್ಯಾನ್ಸರ್ ಚಿಕಿತ್ಸೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ನೀಡುವ ವಿಧಾನಗಳನ್ನು ಮದ್ರಾಸ್ ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ.

iit madras
iit madras

By

Published : Jun 22, 2020, 4:14 PM IST

ಚೆನ್ನೈ (ತಮಿಳು ನಾಡು): ಕ್ಯಾನ್ಸರ್ ಚಿಕಿತ್ಸೆಯಲ್ಲಿ ಪ್ರಗತಿ ಸಾಧಿಸಿರುವ ಮದ್ರಾಸ್ ಸಂಶೋಧಕರು ಸಾಂಪ್ರದಾಯಿಕ ಚಿಕಿತ್ಸೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ನೀಡುವ ವಿಧಾನಗಳನ್ನು ಅಭಿವೃದ್ಧಿಪಡಿಸಿದ್ದಾರೆ.

ಕೀಮೋಥೆರಪಿ ಸೇರಿದಂತೆ ಅನೇಕ ಸಾಮಾನ್ಯ ಕ್ಯಾನ್ಸರ್ ಚಿಕಿತ್ಸೆಗಳಲ್ಲಿ ಬಳಸಲಾಗುವ ಹೈಡ್ರೋಜನ್ ಪೆರಾಕ್ಸೈಡ್ ಮತ್ತು ಹೈಡ್ರಾಕ್ಸಿಲ್ ರಾಡಿಕಲ್​ಗಳಂತಹ ಹೆಚ್ಚು ಪ್ರತಿಕ್ರಿಯಾತ್ಮಕ ಅಣುಗಳಾಗಿರುವ ರಿಯಾಕ್ಟಿವ್ ಆಕ್ಸಿಜನ್ ಪ್ರಭೇದಗಳನ್ನು (ಆರ್​ಓಎಸ್​) ಸಂಶೋಧನಾ ತಂಡವು ಅಧ್ಯಯನ ಮಾಡಿದೆ.

ಐಐಟಿ ಮದ್ರಾಸ್ ತಂಡವು ಮಾಡಿದ ಅವಲೋಕನಗಳು ಉತ್ತಮ ಫಲಿತಾಂಶ ನೀಡಿದ್ದು, ಆ್ಯಂಟಿ ಕ್ಯಾನ್ಸರ್ ಚಿಕಿತ್ಸೆಗೆ ಮಾರ್ಗಗಳನ್ನು ತೋರಿಸುತ್ತವೆ.

ಐಐಟಿ ಮದ್ರಾಸ್‌ನ ಜೈವಿಕ ತಂತ್ರಜ್ಞಾನ ವಿಭಾಗದ ಅಧ್ಯಾಪಕರಾದ ಪ್ರೊ.ಜಿ.ಕೆ. ಸುರೇಶ್ ‌ಕುಮಾರ್ ಮತ್ತು ಪ್ರೊ.ಡಿ.ಕರುನಗರನ್ ಈ ಸಂಶೋಧನೆಯ ನೇತೃತ್ವ ವಹಿಸಿದ್ದರು.

ABOUT THE AUTHOR

...view details