ನವದೆಹಲಿ: ದೆಹಲಿ ಐಐಟಿಯ ಸಸ್ಟೈನಬಲ್ ಎನ್ವಿರೋನರ್ಜಿ ರೀಸರ್ಚ್ ಲ್ಯಾಬ್ (SERL) ವಾಯುಮಾಲಿನ್ಯವನ್ನು ಕಡಿಮೆ ಮಾಡುವ ಮತ್ತುಸುಮಾರು 20 ವರ್ಷಗಳ ಕಾಲ ಬಳಕೆಗೆ ಬರುವ ಸಾಮರ್ಥ್ಯ ಹೊಂದಿರುವ ವನಡಿಎಂ ರೆಡಾಕ್ಸ್ ಫ್ಲೋ ಬ್ಯಾಟರಿಯನ್ನು ತಯಾರಿಸಿದೆ.
ಈ ವೆನಾಡಿಯಮ್ ರೆಡಾಕ್ಸ್ ಫ್ಲೋ ಬ್ಯಾಟರಿಯು ಗ್ರಾಮೀಣ ವಿದ್ಯುದೀಕರಣ, ಇ-ವೆಹಿಕಲ್ ಚಾರ್ಜಿಂಗ್ ಸ್ಟೇಷನ್, ದೇಶೀಯ ಮತ್ತು ವಾಣಿಜ್ಯ ವಿದ್ಯುತ್ ಬ್ಯಾಕ್-ಅಪ್ ನಂತಹವುಗಳಲ್ಲಿ ನವೀಕರಿಸಬಹುದಾದ ಶಕ್ತಿಯನ್ನು ಸಮರ್ಥವಾಗಿ ಸಂಗ್ರಹಿಸಬಹುದು ಮತ್ತು ಬಳಸಿಕೊಳ್ಳಬಹುದು.
ಹೆಚ್ಚುತ್ತಿರುವ ವಾಯುಮಾಲಿನ್ಯ ನಿಯಂತ್ರಿಸಲು ಗ್ರೇಡ್ ರೆಸ್ಪಾನ್ಸ್ ಕ್ರಿಯಾ ಯೋಜನೆಯಡಿ ಇದೇ ಅಕ್ಟೋಬರ್ 15ರಿಂದ ಪರಿಸರ ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಪ್ರಾಧಿಕಾರ (ಇಪಿಸಿಎ) ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಡೀಸೆಲ್ ಜನರೇಟರ್‌ಗಳನ್ನು ಬಳಸುವುದನ್ನು (ತುರ್ತು ಉದ್ದೇಶಗಳನ್ನು ಹೊರತುಪಡಿಸಿ) ನಿಷೇಧಿಸಿದೆ. ಈ ಹಿನ್ನೆಲೆ ಈ ಹೊಸ ವನಡಿಎಂ ರೆಡಾಕ್ಸ್ ಫ್ಲೋ ಬ್ಯಾಟರಿಯನ್ನು ಡೀಸೆಲ್ ಜನರೇಟರ್ ಬದಲಿಗೆ ಬಳಸಿಕೊಳ್ಳಬಹುದಾಗಿದೆ.
ಈ ಕುರಿತು ಈಟಿವಿ ಭಾರತ್ಗೆ ಪ್ರತಿಕ್ರಿಯಿಸಿದ ಐಐಟಿ ದೆಹಲಿಯ ಎಸ್ಇಆರ್ಎಲ್, ಕೆಮಿಕಲ್ ಇಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಅನಿಲ್ ವರ್ಮಾ, "ವಿಆರ್‌ಎಫ್‌ಬಿ ಮಾಲಿನ್ಯರಹಿತ (ಇಂಗಾಲ ಹೊರಸೂಸುವಿಕೆ ಇಲ್ಲ), ಸುರಕ್ಷಿತ ಮತ್ತು ಪರಿಸರ ಸ್ನೇಹಿ ಮತ್ತು ಹೆಚ್ಚು ಬಾಳಿಕೆ ಬರುವಂತಹದ್ದಾಗಿದೆ. ಇನ್ನು ಈ ಬ್ಯಾಟರಿ ಮತ್ತು ಸಾಂಪ್ರದಾಯಿಕ ಬ್ಯಾಟರಿಯ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ವಿದ್ಯುತ್ ಮತ್ತು ಶಕ್ತಿಯ ಸ್ವತಂತ್ರ ಸ್ಕೇಲಿಂಗ್ ಸಾಮರ್ಥ್ಯ.
ವಿದ್ಯುತ್ ಹರಿವಿನ ಬ್ಯಾಟರಿಯು kWh(kilo watt hour)ನಿಂದ MWh(mega watt hour)ಗೆ ಶಕ್ತಿಯನ್ನು ಸಂಗ್ರಹಿಸುತ್ತದೆ ಮತ್ತು ಸಾಂಪ್ರದಾಯಿಕ ಬ್ಯಾಟರಿಗೆ ವ್ಯತಿರಿಕ್ತವಾಗಿ ಕಡಿಮೆ ವೆಚ್ಚದೊಂದಿಗೆ ದೀರ್ಘ ಕಾಲ ಬಳಕೆಗೆ ಬರುತ್ತದೆ. ಮುಂದಿನ ಆರು ತಿಂಗಳಲ್ಲಿ ಈ ಯೋಜನೆ ಪೂರ್ಣಗೊಳ್ಳಲಿದ್ದು ಮುಂದಿನ ಒಂದು ವರ್ಷದೊಳಗೆ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ ಎಂದು ಅವರು ತಿಳಿಸಿದ್ರು.