ಕರ್ನಾಟಕ

karnataka

ETV Bharat / bharat

ದೆಹಲಿಯ ಐಐಟಿ ಅಭಿವೃದ್ಧಿಪಡಿಸಿರುವ ಕೋವಿಡ್-19 ಟೆಸ್ಟ್ ಕಿಟ್‌ಗೆ ಐಸಿಎಂಆರ್ ಅನುಮೋದನೆ - ದೆಹಲಿ ಐಐ

ಮೂರು ತಿಂಗಳ ನಿರಂತರ ಪ್ರಯತ್ನದಿಂದ ದೆಹಲಿ ಐಐಟಿ ಕೋವಿಡ್ -19 ಟೆಸ್ಟ್ ಕಿಟ್ ಅಭಿವೃದ್ಧಿಪಡಿಸಿದ್ದು, ಐಸಿಎಂಆರ್​ನಿಂದ ಅನುಮೋದನೆ ಸಿಕ್ಕಿದೆ.

covid
covid

By

Published : Apr 25, 2020, 3:06 PM IST

ನವದೆಹಲಿ: ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ-(ಐಐಟಿ) ಕೋವಿಡ್ -19 ಟೆಸ್ಟ್ ಕಿಟ್ ಅಭಿವೃದ್ಧಿಪಡಿಸಿದ್ದು, ಇದಕ್ಕೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಅನುಮೋದನೆ ನೀಡಿದೆ.

"ನಾವು ಜನವರಿ ಅಂತ್ಯದ ವೇಳೆಗೆ ಕೊರೊನಾ ವೈರಸ್‌ ಪತ್ತೆ ಹಚ್ಚುವ ಕುರಿತು ಕೆಲಸ ಪ್ರಾರಂಭಿಸಿದ್ದೆವು. ಇದೀಗ 3 ತಿಂಗಳಲ್ಲಿ ಸಿದ್ಧಪಡಿಸಿದ್ದೇವೆ. ಇದು ಹೆಚ್ಚಿನ ಜನರಿಗೆ ಪರೀಕ್ಷೆ ಮಾಡಬಹುದಾದ ಮತ್ತು ಕಡಿಮೆ ಬೆಲೆಯದ್ದಾಗಿದೆ" ಎಂದು ಐಐಟಿ ದೆಹಲಿಯ ಪ್ರಾಧ್ಯಾಪಕ ವಿ.ಪೆರುಮಾಳ್ ಮಾಹಿತಿ ನೀಡಿದರು.

ಸದ್ಯಕ್ಕೆ ಅಸ್ತಿತ್ವದಲ್ಲಿರುವ ಎಲ್ಲಾ ಟೆ್ಸ್ಟ್ ಕಿಟ್​ಗಳಿಗಿಂತ ಇದು ಅಗ್ಗವಾಗಿದೆ ಎಂದು ಅವರು ಹೇಳಿದರು.

ಐಐಟಿ ದೆಹಲಿಯ ಕುಸುಮಾ ಸ್ಕೂಲ್ ಆಫ್ ಬಯೋಲಾಜಿಕಲ್ ಸೈನ್ಸ್​ನ ಸಂಶೋಧಕರು ಅಭಿವೃದ್ಧಿಪಡಿಸಿದ ಕೋವಿಡ್ -19 ಟೆಸ್ಟ್ ಕಿಟ್​ಗೆ ಐಸಿಎಂಆರ್ ಅನುಮೋದನೆ ನೀಡಿದೆ.

ABOUT THE AUTHOR

...view details