ಹೈದರಾಬಾದ್: ಇಲ್ಲಿನ ರಾಷ್ಟ್ರೀಯ ಸಂಶೋಧನಾ ಕೇಂದ್ರವಾದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ (ಐಐಸಿಟಿ) ಯ ವಿಜ್ಞಾನಿಗಳು ಕೊರೊನಾ ಚಿಕಿತ್ಸೆಯಲ್ಲಿ ಜಾಗತಿಕವಾಗಿ ಗುರುತಿಸಲ್ಪಟ್ಟ ಐದು ಔಷಧಗಳಿಗೆ ಸಕ್ರಿಯ ಔಷಧೀಯ ಪದಾರ್ಥಗಳನ್ನು (ಎಪಿಐ) ರಚಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೊರೊನಾ ತಡೆಗಟ್ಟುವ ಔಷಧ ಪ್ರಯೋಗದಲ್ಲಿ ನಿರತರಾದ ಭಾರತೀಯ ವಿಜ್ಞಾನಿಗಳು - ಎಪಿ ವಿನ್ಯಾಸ
ದೇಶದ ವಿಜ್ಞಾನಿಗಳು, ಸಂಶೋಧಕರು ಮತ್ತು ಸಂಶೋಧನಾ ವಿದ್ಯಾರ್ಥಿಗಳು ನಿಗದಿತ ತಂತ್ರಜ್ಞರೊಂದಿಗೆ ಕೊರೊನಾಗೆ ಔಷಧ ಕಂಡುಹಿಡಿಯಲು ಹಗಲು-ರಾತ್ರಿ ಕೆಲಸ ಮಾಡುತ್ತಿದ್ದಾರೆ. ಐಐಸಿಟಿಯ ಹಿರಿಯ ಪ್ರಧಾನ ವಿಜ್ಞಾನಿಗಳಾದ ಡಾ.ರಾಜಿ ರೆಡ್ಡಿ ಮತ್ತು ಡಾ.ಪ್ರಧಾಮ್ ಎಸ್. ಮಾಯಂಕರ್ ಈ ಸಂಶೋಧನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಕೊರೊನಾ ವೈರಸ್ ಚಿಕಿತ್ಸೆ
ದೇಶದಲ್ಲಿ ಲಭ್ಯವಿರುವ ಸ್ಥಳೀಯ ರಾಸಾಯನಿಕಗಳನ್ನು ದೇಶೀಯ ಉದ್ದೇಶಗಳಿಗಾಗಿ ಔಷಧಗಳ ತಯಾರಿಕೆಯಲ್ಲಿ ಬಳಸಲಾಗುತ್ತಿದೆ ಎಂದು ನಿರ್ದಿಷ್ಟವಾಗಿ ಉಲ್ಲೇಖಿಸಬೇಕಾಗಿದೆ. ದೇಶದ ವಿಜ್ಞಾನಿಗಳು, ಸಂಶೋಧಕರು ಮತ್ತು ಸಂಶೋಧನಾ ವಿದ್ಯಾರ್ಥಿಗಳು ನಿಗದಿತ ತಂತ್ರಜ್ಞರೊಂದಿಗೆ ಹಗಲು-ರಾತ್ರಿ ಕೆಲಸ ಮಾಡುತ್ತಿದ್ದಾರೆ. ಐಐಸಿಟಿಯ ಹಿರಿಯ ಪ್ರಧಾನ ವಿಜ್ಞಾನಿಗಳಾದ ಡಾ.ರಾಜಿ ರೆಡ್ಡಿ ಮತ್ತು ಡಾ.ಪ್ರಧಾಮ್ ಎಸ್. ಮಾಯಂಕರ್ ಈ ಸಂಶೋಧನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಈಟಿವಿ ಭಾರತದ ಜೊತೆ ಇಬ್ಬರೂ ತಮ್ಮ ಪ್ರಯೋಗದಲ್ಲಿನ ಪ್ರಗತಿಯನ್ನು ಹಂಚಿಕೊಂಡರು. ಅವು ಇಂತಿವೆ :
- ಎಬೊಲಾ, ಇನ್ಫ್ಲುಯೆಂಜಾ ಮತ್ತು ಇತರ ವೈರಲ್ ಸೋಂಕುಗಳಿಗೆ ಚಿಕಿತ್ಸೆ ನೀಡಲು ಬಳಸುವ ಔಷಧಗಳು ಕೊರೊನಾ ವೈರಸ್ ಮೇಲೆ ಎಷ್ಟು ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತವೆ ಎಂಬುದರ ಕುರಿತು ನಾವು ಅಧ್ಯಯನವನ್ನು ಪ್ರಾರಂಭಿಸಿದ್ದೇವೆ. ವಿಶ್ವ ಆರೋಗ್ಯ ಸಂಸ್ಥೆ ಗುರುತಿಸಿದ ಐದು ಔಷಧಗಳು ಫಾವಿಪಿರವಿರ್ (Favipiravir), ರೆಮೆಡಿಸಿವಿರ್ (Remedicivir), ಉಮಿಫೆನೊವಿರ್ (Umifenovir), ಬೊಲಾಕ್ಸಾವಿರ್ (Bolaxavir), ಕ್ಲೋರೊಕ್ವಿನ್ / ಹೈಡ್ರಾಕ್ಸಿಕ್ಲೋರೋಕ್ವಿನ್ (Chloroquine / Hydroxychloroquine) ಗೆ ಸಂಬಂಧಿಸಿದ ಅಣುಗಳ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸಿದೆ.
- ಪ್ರಯೋಗಾಲಯದಲ್ಲಿ ಕೊರೊನಾ ವಿರುದ್ಧ ಕೆಲಸ ಮಾಡುವ ಔಷಧಗಳ ಎಪಿಐ ಅನ್ನು ನಾವು ಈಗಾಗಲೇ ಅಭಿವೃದ್ಧಿಪಡಿಸಿದ್ದೇವೆ. ಇದಕ್ಕಾಗಿ, ನಾವು ಕಚ್ಚಾ ಸಾಮಗ್ರಿಗಳ ಆಮದನ್ನು ಅವಲಂಬಿಸದೇ ಸ್ಥಳೀಯವಾಗಿ ಲಭ್ಯವಿರುವ ರಾಸಾಯನಿಕಗಳನ್ನು ಬಳಸುತ್ತೇವೆ. ನಾವು ಅಗ್ಗದ ಉತ್ಪಾದನಾ ಪ್ರಕ್ರಿಯೆಯನ್ನು ಅಭಿವೃದ್ಧಿಪಡಿಸಿದ್ದೇವೆ. ಪರಿಣಾಮವಾಗಿ, ಔಷಧದ ಬೆಲೆಯೂ ತುಂಬಾ ಕಡಿಮೆಯಾಗಿದೆ.
- ಫಾವಿಪಿರವಿರ್ ಒಂದು ಸಾಮಾನ್ಯ ಔಷಧ. ಎಪಿಐ ಮಾಡಿದ ಆರು ವಾರಗಳಲ್ಲಿ, ನಾವು ಪ್ರಗತಿ ಸಾಧಿಸಿದ್ದೇವೆ. ನಾವು ಎಪಿಐ ಅನ್ನು ಇತರ ರೀತಿಯಲ್ಲಿ ಅಭಿವೃದ್ಧಿಪಡಿಸಿದ್ದೇವೆ ಮತ್ತು ತಂತ್ರಜ್ಞಾನವನ್ನು ಔಷಧೀಯ ಕಂಪನಿಗೆ ವರ್ಗಾಯಿಸಿದ್ದೇವೆ. ಕಂಪನಿಯು ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾವನ್ನು (ಡಿಸಿಜಿಐ) ಸಂಪರ್ಕಿಸಿದೆ. ಇದು ಮಾರುಕಟ್ಟೆಗೆ ತರುವ ಮೊದಲು ಪರೀಕ್ಷೆಗಳಿಗೆ ಶಿಫಾರಸು ಮಾಡಿದೆ. ರೆಮೆಡಿಕಾವಿರ್ (Remedicavir) ಮತ್ತು ಉಮಿಫೆನೊವಿರ್ (Umifenovir) ನಂತಹ ಔಷಧಿಗಳ ತಯಾರಿಕೆಗಾಗಿ ಮಧ್ಯವರ್ತಿಗಳನ್ನು (ಕಚ್ಚಾ ವಸ್ತುಗಳ ಮುಂದಿನ ಹಂತ) ತಯಾರಿಸುವ ಪ್ರಕ್ರಿಯೆಯನ್ನು ನಾವು ಅಭಿವೃದ್ಧಿಪಡಿಸಿದ್ದೇವೆ. ನಾವು ಈ ತಂತ್ರಜ್ಞಾನಗಳನ್ನು ಇತರ ಕೆಲವು ಔಷಧೀಯ ಕಂಪನಿಗಳಿಗೆ ವರ್ಗಾಯಿಸುವ ಪ್ರಕ್ರಿಯೆಯಲ್ಲಿದ್ದೇವೆ.
- ಕೊರೊನಾ ವೈರಸ್ ಚಿಕಿತ್ಸೆಯಲ್ಲಿ ಬಳಸಲು ಐಐಸಿಟಿ ಅಭಿವೃದ್ಧಿಪಡಿಸಿದ ವಿವಿಧ ಔಷಧಗಳು ಅದರ ಎಲ್ಲಾ ಕಾರ್ಯವಿಧಾನದ ಹಂತಗಳನ್ನು ದಾಟುತ್ತವೆ ಮತ್ತು ಶೀಘ್ರದಲ್ಲೇ ದೇಶೀಯ ಮಾರುಕಟ್ಟೆಯಲ್ಲಿ ಲಭ್ಯವಾಗುತ್ತವೆ ಎಂದು ನಾವು ನಂಬುತ್ತೇವೆ. ಫಾವಿಪಿರವಿರ್ ಅಂತಹ ಔಷಧಗಳಲ್ಲಿ ಒಂದಾಗಿದೆ. ಅದು ಶೀಘ್ರದಲ್ಲೇ ಮುಕ್ತ ಮಾರುಕಟ್ಟೆಯನ್ನು ತಲುಪುವ ನಿರೀಕ್ಷೆಯಿದೆ. ಇದು ಮಾರುಕಟ್ಟೆಗೆ ಪ್ರವೇಶಿಸುವ ಮೊದಲು ಪರೀಕ್ಷೆಗಳು ಮತ್ತು ಡಿಸಿಜಿಐ ಶಿಫಾರಸುಗಳನ್ನು ಆಧರಿಸಿದೆ. ಪರೀಕ್ಷೆಗಳ ಫಲಿತಾಂಶಗಳು ಯಶಸ್ವಿಯಾದರೆ, ಒಂದರಿಂದ ಎರಡು ತಿಂಗಳ ಅವಧಿಯಲ್ಲಿ ಔಷಧವು ಮಾರುಕಟ್ಟೆಯಲ್ಲಿ ಲಭ್ಯವಾಗಬಹುದು ಎಂದು ನಮಗೆ ವಿಶ್ವಾಸವಿದೆ.
Last Updated : May 26, 2020, 5:03 PM IST