ಕರ್ನಾಟಕ

karnataka

By

Published : Aug 8, 2020, 7:41 PM IST

ETV Bharat / bharat

ಪ್ರಕೃತಿ ಮುನಿಸು, ಸರ್ಕಾರದ ನಿರ್ಲಕ್ಷ್ಯ.. ಈ ಜಿಲ್ಲೆಯ ನೆರೆ ಸಂತ್ರಸ್ತರ ಗೋಳು ಕೇಳೋರು ಯಾರು?

ಸರ್ಕಾರಿ ಅಧಿಕಾರಿಗಳು ಅಥವಾ ಜನಪ್ರತಿನಿಧಿಗಳಿಂದ ಇನ್ನೂ ಯಾವುದೇ ರೀತಿಯ ಸಹಾಯ ದೊರೆತಿಲ್ಲ. ಮಕ್ಕಳಿಗೆ ಸಾಕಷ್ಟು ಆಹಾರವಿಲ್ಲ, ಜಾನುವಾರುಗಳಿಗೆ ಮೇವು ಸಿಗದೆ ಪರದಾಡುವ ಪರಿಸ್ಥತಿ ನಿರ್ಮಾಣವಾಗಿದೆ..

ದರ್ಭಂಗಾ ಜಿಲ್ಲೆ ನೆರೆ ಸಂತ್ರಸ್ತರ ಗೋಳು
ದರ್ಭಂಗಾ ಜಿಲ್ಲೆ ನೆರೆ ಸಂತ್ರಸ್ತರ ಗೋಳು

ದರ್ಭಂಗಾ (ಬಿಹಾರ): ಬಿಹಾರದ ದರ್ಭಂಗಾ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಭೀಕರವಾಗಿದೆ. ಕಳೆದ 15-20 ದಿನಗಳಲ್ಲಿ ಜನರು ತಮ್ಮ ಹಳ್ಳಿಗಳನ್ನು ತೊರೆದು ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದಾರೆ.

ದರ್ಭಂಗಾ ಜಿಲ್ಲೆ ನೆರೆ ಸಂತ್ರಸ್ತರ ಗೋಳು

ಸಿರ್ನಿಯಾ, ಅಮ್ಮಾಡಿಹ್, ಸಿನುರಾ ಮತ್ತು ಇತರ ಗ್ರಾಮಗಳಿಂದ ಸುಮಾರು 1,000 ಕುಟುಂಬಗಳು ಈಗ ಸಿರ್ನಿಯಾದಲ್ಲಿ ಆಶ್ರಯ ಪಡೆದಿವೆ. ತಾವೇ ಸ್ವತಃ ಪ್ಲಾಸ್ಟಿಕ್​ನಿಂದ ಆಸರೆ ಮಾಡಿಕೊಂಡು ಬದುಕುತ್ತಿದ್ದಾರೆ.

ಸರ್ಕಾರಿ ಅಧಿಕಾರಿಗಳು ಅಥವಾ ರಾಜಕಾರಣಿಗಳಿಂದ ಇನ್ನೂ ಯಾವುದೇ ರೀತಿಯ ಸಹಾಯ ದೊರೆತಿಲ್ಲ. ಮಕ್ಕಳಿಗೆ ಸಾಕಷ್ಟು ಆಹಾರವಿಲ್ಲ, ಜಾನುವಾರುಗಳಿಗೆ ಮೇವು ಸಿಗದೆ ಪರದಾಡುವ ಪರಿಸ್ಥತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ನಮ್ಮ ಮನೆಗಳಿಗೆ ನೀರು ಪ್ರವೇಶಿಸಿದೆ. ನಮ್ಮನ್ನು ಭೇಟಿಯಾಗಲು ಯಾರೂ ಬಂದಿಲ್ಲ. ಯಾವುದೇ ಸಹಾಯವನ್ನು ನೀಡಿಲ್ಲ ಎಂದು ನೆರೆ ಪೀಡಿತ ಪ್ರದೇಶದ ಗ್ರಾಮಸ್ಥ ಮೋಹನ್ ಸದಾ ಹೇಳಿದರು.

ಅದೇ ರೀತಿ, ಮತ್ತೊಬ್ಬ ಗ್ರಾಮಸ್ಥ ಪರಸ್ ಸದಾ, ಆಹಾರದ ಕೊರತೆಯು ಅತ್ಯಂತ ಆತಂಕಕಾರಿಯಾಗಿದೆ. ಮಕ್ಕಳಿಗೆ, ನಮಗೆ, ಜಾನುವಾರುಗಳಿಗೆ ಸರಿಯಾದ ಆಹಾರ ಸಿಗುತ್ತಿಲ್ಲ ಎಂದು ಹೇಳಿದರು.

ABOUT THE AUTHOR

...view details