ಹೈದರಾಬಾದ್ :ಲಾಕ್ಡೌನ್ ಹೇರಿದ್ರಿಂದ ಯುವಕ-ಯುವತಿಯರು, ಮಕ್ಕಳು, ವೃದ್ಧರೆಲ್ಲ ಕೆಲಸವಿಲ್ಲದೇ ಸಮಯದೂಡಲು ಹೆಣಗಾಡುತ್ತಿದ್ದಾರೆ. ಯುವಕರಂತೂ ಜಿಮ್ ಓಪನ್ ಆಗಲ್ಲಾ ಅಂತಾ ವರ್ಕೌಟ್ ಟೆನ್ಷನ್‌ನಲ್ಲೇ ಕಾಲಹರಣ ಮಾಡುತ್ತಿದ್ದಾರೆ. ಇಲ್ಲೊಂದಿಷ್ಟು ವಿಡಿಯೋಗಳಿವೆ ನೋಡಿ.. ಇದನ್ನು ನೋಡಿದ್ರೆ ವಯಸ್ಸಾದವರಷ್ಟೇ ಅಲ್ಲಾ.. ಯುವಕರೂ ಕೂಡಾ ನಾಚ್ಕೋಬೇಕು. ಇವರು ಉಷಾ ಸೋಮನ್. ಖ್ಯಾತ ನಟ, ಮಾಡೆಲ್ ಆಗಿರುವ ಮಿಲಿಂದ್ ಸೋಮನ್ ಅವರ ತಾಯಿ. ಇವರ ವಯಸ್ಸು 81. ಆದರೆ, ಇನ್ನೂ 18ರ ಯುವಕರಲ್ಲೂ ಇರದ ಹುರುಪು, ಶಕ್ತಿ, ತಾಕತ್ತು ಎಲ್ಲಾ ಇವರಲ್ಲಿ ತುಂಬಿದೆ. ತಮ್ಮ ಮಗನ ಜತೆಗೆ ಡಿಪ್ಸ್ ಹೊಡೆಯಲು ಕಾಂಪಿಟೇಷನ್ ಕೊಟ್ಟಿದ್ದಾರೆ ಈ 'ತರುಣಿ ಅಜ್ಜಿ'. ಅದು ಕೂಡಾ ಸೀರೆಯುಟ್ಟುಕೊಂಡೇ ಒಂದಲ್ಲಾ, ಎರಡಲ್ಲಾ ಬರೋಬ್ಬರಿ 16 ಡಿಪ್ಸ್‌ನ ಸತತವಾಗಿ ತೆಗೆದು ಯುವಕರಿಗೂ ಚಾಲೆಂಜ್ ಹಾಕಿದ್ದಾರೆ.
ಈ ವಿಡಿಯೋವನ್ನು ಮಿಲಿಂದ್ ಸೋಮನ್ ಅವರೇ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡು ತಮ್ಮ ಅಮ್ಮನನ್ನು ಹಾಡಿ ಹೊಗಳಿದ್ದಾರೆ. ಸದ್ಯ ಮನೆಯಲ್ಲೇ ಯುವಕರೆಲ್ಲಾ ಕೂತಿರೋ ಈ ಸಮಯದಲ್ಲಿ ಈ ವಿಡಿಯೋ ನೋಡೋದು ತುಂಬಾ ಸೂಕ್ತ.