ಹೈದರಾಬಾದ್: ಜಗತ್ತಿನ ಸೂಪರ್ ಪವರ್ ಆಗಲು ಚೀನಾ ಕೊರೊನಾ ವೈರಸ್ ಅನ್ನು ಸೃಷ್ಠಿಸಿದೆ ಎಂಬ ಸಂಚಿನ ಸಿದ್ದಾಂತ ಈಗ ಮುನ್ನೆಲೆಗೆ ಬಂದಿದೆ. ಚೀನಾದ ವುಹಾನ್ ನಗರದ ಪ್ರಯೋಗಾಲಯದಿಂದ ಕೊರೊನಾ ವೈರಸ್ ತಪ್ಪಿಸಿಕೊಂಡಿದೆ ಎಂಬ ಅಂಶವನ್ನು ಚೀನಾ ಸರ್ಕಾರ ಮರೆಮಾಡಿದೆ ಎಂಬ ಅಮೆರಿಕಾ ಅಧ್ಯಕ್ಷರ ಆರೋಪ ಈ ಸಿದ್ಧಾಂತಕ್ಕೆ ಇನ್ನಷ್ಟು ಪುಷ್ಠಿ ನೀಡಿದೆ. ಆದರೆ ವಿಜ್ಞಾನಿಗಳು ಮತ್ತು ಗುಪ್ತಚರ ಸಂಸ್ಥೆಗಳು ಅಮೆರಿಕದ ಈ ಆರೋಪಗಳನ್ನು ತಳ್ಳಿಹಾಕಿವೆ. ಪ್ರಾಣಿ ಮತ್ತು ಮಾನವ ಸಂಪರ್ಕದ ಮೂಲಕ ವೈರಸ್ ಹಬ್ಬಿದೆ ಎಂದು ಅವರು ಹೇಳಿಕೆ ನೀಡಿದ್ದಾರೆ.
ಕೊರೊನಾ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಮತ್ತು ಚಿಕಿತ್ಸೆಯ ವೈಫಲ್ಯವನ್ನು ಮುಚ್ಚಿಹಾಕಲು ಅಮೆರಿಕದ ನಾಯಕರು ಚೀನಾವನ್ನು ಆರೋಪಿಸುತ್ತಿದ್ದಾರೆ ಎಂಬ ಇನ್ನೊಂದು ವಾದವಿದೆ. ಅಲ್ಲದೆ, ಚೀನಾದ ವುಹಾನ್ ನಗರದಲ್ಲಿರುವ ವಿವಾದಾತ್ಮಕ ಪ್ರಯೋಗಾಲಯಕ್ಕೆ ಯುಎಸ್ 3.7 ಮಿಲಿಯನ್ ಡಾಲರ್ ಹಣವನ್ನು ನೀಡಿದೆ ಎಂಬ ಅಂಶವು ಇತ್ತೀಚೆಗೆ ಬೆಳಕಿಗೆ ಬಂದಿದೆ. ಏಷ್ಯಾ ಖಂಡಗಳಲ್ಲಿ 2002-03ರ ಸಮಯದಲ್ಲಿ ಸಾರ್ಸ್ ಸಾಂಕ್ರಾಮಿಕ ರೋಗದ ಹಬ್ಬಿದಾಗ, ಚೀನಾ ವುಹಾನ್‌ನಲ್ಲಿ ವೈರಾಲಜಿ (ಸಾಂಕ್ರಾಮಿಕ ರೋಗ ಪತ್ತೆ)ಪ್ರಯೋಗಾಲಯವನ್ನು ಸ್ಥಾಪಿಸಲು ನಿರ್ಧರಿಸಿತು ಮತ್ತು ಇದು ಭವಿಷ್ಯದಲ್ಲಿ ಉದ್ಭವಿಸುವ ಸಾಂಕ್ರಾಮಿಕ ರೋಗವನ್ನು ಎದುರಿಸುವ ಚೀನಾದ ಉದ್ದೇಶವಾಗಿತ್ತು. ರೋಗ ನಿರೋದಕ ಔಷಧಿಗಳನ್ನು ಅಭಿವೃದ್ಧಿಪಡಿಸಲು ವೈರಾಲಜಿ ಪ್ರಯೋಗಾಲಯ ಸಹಕಾರಿಯಾಗಲಿದೆ ಎಂಬುದು ಚೀನಾ ಸರ್ಕಾರದ ಆಶಯವಾಗಿತ್ತು. ಪ್ರಯೋಗಾಲಯ ನಿರ್ಮಿತ ವೈರಸ್ ಅನ್ನು ಅಭಿವೃದ್ಧಿಪಡಿಸುವ ಮೂಲಕ ಚೀನಾ ವಿಶ್ವ ರಾಷ್ಟ್ರಗಳ ವಿರುದ್ಧ ಸಂಚು ರೂಪಿಸಿದೆ ಎನ್ನುವುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಹಲವಾರು ಸಂಶೋಧನಾತ್ಮಕ ಅಧ್ಯಯನಗಳು ತಿಳಿಸಿವೆ.
ಕೊರೊನಾ ವೈರಸ್ ಹರಡುವ ಯೋಜನೆಗಳನ್ನು ಭಯೋತ್ಪಾದಕ ಗುಂಪುಗಳು ಪಡೆದುಕೊಳ್ಳ ಬಹುದು ಎಂದು ಯುಎಸ್ ಗುಪ್ತಚರ ಸಂಸ್ಥೆಗಳು ದೃಡ ಪಡಿಸಿವೆ. ವರ್ಣಭೇದವನ್ನು ವಿರೋಧಿಸುವವರಿಂದ ಹಿಡಿದು ಇಸ್ಲಾಮಿಕ್ ಭಯೋತ್ಪಾದಕರವರೆಗೆ ಬಲವಾದ ಸಿದ್ಧಾಂತಗಳನ್ನು ಹೊಂದಿರುವ ಜನರು ಇಂತಹ ಜೈವಿಕ ಯುದ್ಧಗಳಲ್ಲಿ ಭಾಗಿಯಾಗುವ ಸಾಧ್ಯತೆಯಿದೆ ಎಂದು ಯುಸ್ ಗುಪ್ತಚರ ಸಂಸ್ಥೆಗಳು ಹೇಳಿವೆ. ಭಯೋತ್ಪಾದಕ ಗುಂಪು ಈಗಾಗಲೇ ಇಂತಹ ದಾಳಿಯನ್ನು ನಡೆಸಲು ಸಜ್ಜಾಗಿದೆ ಎಂದು ಗುಪ್ತಚರ ವರದಿಯೊಂದು ಬಹಿರಂಗಪಡಿಸಿದೆ. ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಏಕಕಾಲದಲ್ಲಿ ಏರಿದರೆ, ಸಾರ್ವಜನಿಕ ಆರೋಗ್ಯ ವ್ಯವಸ್ಥೆಯು ಕುಸಿಯುತ್ತದೆ ಮತ್ತು ಇದು ಸರ್ಕಾರವನ್ನು ಅಸಹಾಯಕ ಸ್ಥಿತಿಗೆ ನೂಕುತ್ತದೆ ಎನ್ನಲಾಗಿದೆ.
ಭಯೋತ್ಪಾದಕ ದಾಳಿಯನ್ನು ತಡೆಯಲು ಸರಕಾರ ಮೂರು ಹಂತದ ಕಾರ್ಯತಂತ್ರವನ್ನು ಜಾರಿಗೆ ತರಬೇಕು ಎಂದು ಗುಪ್ತಚರ ಮೂಲಗಳು ಸಲಹೆ ನೀಡಿವೆ. ಮೊದಲನೆಯದಾಗಿ, ಭಯೋತ್ಪಾದಕ ದಾಳಿಗೆ ಸಂಬಂಧಿಸಿದ ಯಾವುದೇ ಸಂಭಾಷಣೆಗಳನ್ನು ಕದ್ದಾಲಿಸಬೇಕು. ಸಾಮಾಜಿಕ ಮಾಧ್ಯಮ, ಇಮೇಲ್‌ಗಳು, ಎಸ್‌ಎಂಎಸ್, ಇಂಟರ್ನೆಟ್ ಚಾಟ್‌ರೂಮ್‌ಗಳು ಮತ್ತು ಸಂದೇಶ ವಾಹಕಗಳನ್ನು ಸರಕಾರ ಕದ್ದಾಲಿಸಬೇಕು ಅಂತಹ ಸಿದ್ಧಾಂತಗಳನ್ನು ಹೊಂದಿರುವ ಜನರನ್ನು ಕಣ್ಗಾವಲಿನಲ್ಲಿಡಬೇಕು ಎಂದು ಸೂಚಿಸಿವೆ. ಅವರ ವಾಸಸ್ಥಳಗಳ ಮೇಲೆ ನಿರಂತರ ಕಣ್ಗಾವಲಿಡಬೇಕು . ಉದ್ದೇಶಪೂರ್ವಕ ಕೊರೊನಾ ಸಾಂಕ್ರಾಮಿಕ ರೋಗ ಹರಡುವುದನ್ನು ಜೈವಿಕ ಭಯೋತ್ಪಾದನೆ ಎಂದು ಪರಿಗಣಿಸಬೇಕು ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಗುಪ್ತಚರ ಇಲಾಖೆಗಳು ಸೂಚಿಸಿವೆ.
ಎರಡನೇ ಹಂತದ ಕ್ರಮವಾಗಿ, ಉದ್ದೇಶಪೂರ್ವಕ ಸೋಂಕು ಹರಡುವವರನ್ನು ಗುರುತಿಸಿ ಶಿಕ್ಷಿಸಬೇಕು. ವೈರಸ್ ಹರಡುವಿಕೆಯ ಮೂಲದ ಪತ್ತೆ ಕಾರ್ಯ ಆರಂಭಿಕ ಹಂತಗಳಲ್ಲಿ ಪರಿಣಾಮಕಾರಿಯಾಗಿ ಮಾಡಬಹುದು. ಆದರೆ ಸೋಂಕು ಹರಡುವಿಕೆ ಮೂರನೇ ಹಂತಕ್ಕೆ ತಲುಪುತ್ತಿದ್ದಂತೆ ಅದರ ಮೂಲವನ್ನು ಕಂಡುಹಿಡಿಯುವುದು ಕಷ್ಟಕರ ಕೆಲಸ. ಜೈವಿಕ ಭಯೋತ್ಪಾದಕರನ್ನು ಹೇಗೆ ಪತ್ತೆ ಹಚ್ಚುವುದು ಎಂಬ ಕುರಿತು ಸಾಂಕ್ರಾಮಿಕ ಚಿಕ್ಸಿಕ ವೈದ್ಯರು ಉತ್ತರವನ್ನು ಹೊಂದಿದ್ದಾರೆ. ಒಂದು ಪ್ರದೇಶದಲ್ಲಿ ಹೊಸ ರೀತಿಯ ಸಾಂಕ್ರಾಮಿಕ ರೋಗ ಹುಟ್ಟಿಕೊಂಡರೆ ಅದನ್ನು ಹಬ್ಬಿಸಲಾಗಿದೆ ಎಂದು ಊಹಿಸಬಹುದು.