ನವದೆಹಲಿ: ಮಹಾರಾಷ್ಟ್ರ ಸರ್ಕಾರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಅಜಿತ್ ಪವಾರ್ಗೆ ನೋಟಿಸ್ ಜಾರಿಗೊಳಿಸಿದ ಸುಪ್ರೀಂಕೋರ್ಟ್, ಸದ್ಯಕ್ಕೆ ಬಹುಮತ ಸಾಬೀತು ಅಗತ್ಯವಿಲ್ಲ ಎಂದು ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.
ಮಹಾರಾಷ್ಟ್ರದಲ್ಲಾದ ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಿದೆ. ಇದರಿಂದಾಗಿ ನಿನ್ನೆ ಸುಪ್ರೀಂ ಶಿವಸೇನೆ, ಎನ್ಸಿಪಿ ಹಾಗೂ ಕಾಂಗ್ರೆಸ್ ಸುಪ್ರೀಂಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದವು. ಇಂದು ಅದರ ವಿಚಾರಣೆ ಸುಪ್ರೀಂಕೋರ್ಟ್ನಲ್ಲಿ ನಡೆಯಿತು.
ಬಿಜೆಪಿ ಇಂದೇ ಬಹುಮತ ಸಾಬೀತುಪಡಿಸಲಿ. ಅವರು ಯಾರಿಗೆ ದಾಖಲೆಗಳನ್ನು ಸಲ್ಲಿಸಿದ್ದಾರೆ ಅನ್ನೋದು ಯಾರಿಗೂ ತಿಳಿದಿಲ್ಲ. ಅವರಿಗೆ ಬಹುಮತ ಇದೆ ಎಂದಾದರೆ ಇಂದೇ ಅದನ್ನು ಸಾಬೀತುಪಡಿಸಲಿ. ಇಲ್ಲವಾದಲ್ಲಿ ನಮಗೆ ಸರ್ಕಾರ ರಚನೆಗೆ ಅವಕಾಶ ನೀಡಲಿ ಎಂದು ಶಿವಸೇನೆ ಪರ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿದರು.
ಶಿವಸೇನೆ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ನಿನ್ನೆ ಬೆಳಿಗ್ಗೆ 5:47ಕ್ಕೆ ಆಶ್ಚರ್ಯಕರ ರೀತಿ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಡಳಿತವನ್ನು ತೆಗೆದು ಹಾಕಲಾಯ್ತು. ಆ ಬಳಿಕ 3 ಗಂಟೆಗೂ ಕಡಿಮೆ ಅವಧಿಯಲ್ಲಿ ದೇವೆಂಧ್ರ ಫಡ್ನವೀಸ್ ಹಾಗೂ ಅಜಿತ್ ಪವಾರ್ ಪ್ರಮಾಣ ವಚನ ಸ್ವೀಕರಿಸಿದರು. ಆ ಬಳಿಕ ಆಗಿದ್ದೆಲ್ಲ ಆಶ್ಚರ್ಯ. ಅವರು ಯಾವ ದಾಖಲೆಗಳಗಳನ್ನಿಟ್ಟು ಸರ್ಕಾರ ರಚನೆ ಮಾಡಿದ್ದಾರೆ? ಎಲ್ಲವೂ ಜನಾದೇಶದ ವಿರುದ್ಧ ನಡೆದಿದೆ ಎಂದು ವಾದಿಸಿದರು.
ಬಿಜೆಪಿ ಇಂದೇ ಬಹುಮತ ಸಾಬೀತುಪಡಿಸಲಿ. ಅವರು ಯಾರಿಗೆ ದಾಖಲೆಗಳನ್ನು ಸಲ್ಲಿಸಿದ್ದಾರೆ ಅನ್ನೋದು ಯಾರಿಗೂ ತಿಳಿದಿಲ್ಲ. ಅವರಿಗೆ ಬಹುಮತ ಇದೆ ಎಂದಾದರೆ ಇಂದೇ ಅದನ್ನು ಸಾಬೀತುಪಡಿಸಲಿ. ಇಲ್ಲವಾದಲ್ಲಿ ನಮಗೆ ಸರ್ಕಾರ ರಚನೆಗೆ ಅವಕಾಶ ನೀಡಲಿ ಎಂದು ವಾದ ಮಂಡಿಸಿದರು.