ಕರ್ನಾಟಕ

karnataka

ETV Bharat / bharat

ಚುನಾವಣಾ ಪಟ್ಟಿಯಲ್ಲಿ 30 ಸಾವಿರ ರೋಹಿಂಗ್ಯಾಗಳಿದ್ದರೆ, ಅಮಿತ್ ಶಾ ಮಲಗಿದ್ದಾರೆಯೇ? ಒವೈಸಿ ಪ್ರಶ್ನೆ

ಸಂಸದ ಅಸಾದುದ್ದೀನ್​ ಒವೈಸ್ ಬಿಜೆಪಿಗೆ ತಿರುಗೇಟು ನೀಡಿದ್ದಾರೆ. ಜಿಹೆಚ್​ಎಂಸಿ ಚುನಾವಣಾ ಪಟ್ಟಿಯಲ್ಲಿ 30,000 ರೋಹಿಂಗ್ಯಾಗಳು ಇದ್ದಾರೆ ಎಂದಿದ್ದಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಏನು ಮಾಡುತ್ತಿದ್ದಾರೆ? ಅವರು ಮಲಗಿದ್ದಾರೆಯೇ? 30-40 ಸಾವಿರ ರೋಹಿಂಗ್ಯಾಗಳನ್ನು ಹೇಗೆ ಪಟ್ಟಿ ಮಾಡಲಾಗಿದೆ ಎಂಬುದನ್ನು ನೋಡುವುದು ಅವರ ಕೆಲಸವಲ್ಲವೇ? ಎಂದು ಪ್ರಶ್ನಿಸಿದ್ದಾರೆ.

Amith Shah- Owaisi
ಅಮಿತ್ ಶಾ ಒವೈಸಿ

By

Published : Nov 24, 2020, 6:53 AM IST

ಹೈದರಾಬಾದ್​:ದೇಶದೊಳಗೆ ಅಕ್ರಮವಾಗಿ ನುಸುಳಿ, ನಕಲಿ ದಾಖಲೆಗಳ ಮೂಲಕ ಆಧಾರ್, ಪಾಸ್​ ಪೋರ್ಟ್​ ಸಂಗ್ರಹಿಸಿ ದೇಶಾದ್ಯಂತ ಹರಿದು ಹಂಚಿರುವ ರೋಹಿಂಗ್ಯ ಮುಸ್ಲಿಮರ ಗಡಿಪಾರು ರಾಜಕೀಯ ತಿರುವು ಪಡೆದುಕೊಂಡಿದೆ.

ಹೈದರಾಬಾದ್​ಗೆ ನಿನ್ನೆ ಭೇಟಿ ನೀಡಿದ್ದ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಅವರು, ಸಂಸದ ಅಸಾದುದ್ದೀನ್ ಒವೈಸಿ ಮತ್ತು ಅವರ ಸಹೋದರ ಅಕ್ಬರುದ್ದೀನ್ ಒವೈಸಿ ಇಬ್ಬರೂ ವಿಭಜಕ ಮತ್ತು ಕೋಮುವಾದಿ ರಾಜಕೀಯದ ಆಟ ಆಡುತ್ತಿದ್ದಾರೆ. ಹೈದರಾಬಾದ್‌ನಲ್ಲಿ ರೋಹಿಂಗ್ಯಾ ಮುಸ್ಲಿಮರಿಗೆ ಅವಕಾಶ ನೀಡುತ್ತಿದ್ದಾರೆಯೇ ಹೊರತು ಅಭಿವೃದ್ಧಿಗೆ ಅವಕಾಶ ನೀಡುತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದ್ದರು.

ಅಸಾದುದ್ದೀನ್ ಓವೈಸಿಗೆ ಹಾಕುವ ಪ್ರತಿ ಮತವೂ ಭಾರತದ ವಿರುದ್ಧ ಚಲಾಯಿಸಿದಂತೆ: ಸಂಸದ ತೇಜಸ್ವಿ ಸೂರ್ಯ

ಈ ಬಳಿಕ ಅಸಾದುದ್ದೀನ್​ ಒವೈಸ್ ಬಿಜೆಪಿಗೆ ತಿರುಗೇಟು ನೀಡಿದ್ದು, ಚುನಾವಣೆಯ ಪಟ್ಟಿಯಲ್ಲಿ 30,000 ರೋಹಿಂಗ್ಯಾಗಳು ಇದ್ದರೆ. ಗೃಹ ಸಚಿವ ಅಮಿತ್ ಶಾ ಏನು ಮಾಡುತ್ತಿದ್ದಾರೆ? ಅವರು ಮಲಗಿದ್ದಾರೆಯೇ? 30-40 ಸಾವಿರ ರೋಹಿಂಗ್ಯಾಗಳನ್ನು ಹೇಗೆ ಪಟ್ಟಿ ಮಾಡಲಾಗಿದೆ ಎಂಬುದನ್ನು ನೋಡುವುದು ಅವರ ಕೆಲಸವಲ್ಲವೇ? ಬಿಜೆಪಿ ಪ್ರಾಮಾಣಿಕವಾಗಿದ್ದರೆ ನಾಳೆ ಸಂಜೆಯೊಳಗೆ ಅಂತಹ 1,000 ಹೆಸರುಗಳನ್ನು ತೋರಿಸಬೇಕು ಎಂದು ಸವಾಲು ಹಾಕಿದ್ದಾರೆ.

ABOUT THE AUTHOR

...view details