ಕರ್ನಾಟಕ

karnataka

By

Published : Jan 24, 2020, 3:25 PM IST

ETV Bharat / bharat

'ಸುಪ್ರೀಂಕೋರ್ಟ್ ಪೌರತ್ವ (ತಿದ್ದುಪಡಿ) ಕಾಯ್ದೆ ಎತ್ತಿ ಹಿಡಿದರೆ, ದೇಶದಲ್ಲಿ ಜಾತ್ಯತೀತತೆ ಅಂತ್ಯವಾದಂತೆ'

ವಿವಾದಾತ್ಮಕ ಪೌರತ್ವ (ತಿದ್ದುಪಡಿ) ಕಾಯ್ದೆಯ ಕುರಿತು ಸಲ್ಲಿಸಲಾದ ಅರ್ಜಿಗಳು ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇರುವಾಗ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ದಿಗ್ವಿಜಯ ಸಿಂಗ್ ಮಾತನಾಡಿದ್ದು, ಸುಪ್ರೀಂಕೋರ್ಟ್ ಸಿಎಎ ಕಾನೂನನ್ನು ಸಾಂವಿಧಾನಿಕವೆಂದು ಪರಿಗಣಿಸಿದರೆ ದೇಶದಲ್ಲಿ ಜಾತ್ಯತೀತತೆ ಅಂತ್ಯವಾದಂತೆ ಎಂದಿದ್ದಾರೆ.

digvijaya
ದಿಗ್ವಿಜಯ ಸಿಂಗ್

ಮಧ್ಯಪ್ರದೇಶ (ಭೋಪಾಲ್): ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು ಸುಪ್ರೀಂಕೋರ್ಟ್​ 'ಸಾಂವಿಧಾನಿಕ'ವೆಂದು ಪರಿಗಣಿಸಿದರೆ ದೇಶದಲ್ಲಿ ಜಾತ್ಯತೀತತೆ ಅಂತ್ಯವಾದಂತೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ ಸಿಂಗ್​ ಹೇಳಿದ್ದಾರೆ.

ದೇಶದಲ್ಲಿ ಮುಸ್ಲಿಂ ಸಮುದಾಯ ಭಯದಿಂದ ಜೀವಿಸುತ್ತಿದ್ದು, ಇದು ಸುಪ್ರೀಂಕೋರ್ಟ್​ಗೆ ಕಾನೂನಿನ ಸಿಂಧುತ್ವವನ್ನು ಪರಿಶೀಲಿಸುವಲ್ಲಿ ಸವಾಲಾಗಲಿದೆ ಎಂದರು.ವಿವಿಧತೆಯಲ್ಲಿ ಏಕತೆ ನಮ್ಮ ದೇಶದ ಅತಿ ದೊಡ್ಡ ಶಕ್ತಿಯಾಗಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಈ ತತ್ವವನ್ನು ಹಾಳು ಮಾಡಿದ್ದಾರೆ ಎಂದು ಆರೋಪಿಸಿದ ಅವರು, ನನ್ನನ್ನು ಮುಸ್ಲಿಮರ ಪರ ಎಂದು ಕರೆಯುತ್ತಿದ್ದಾರೆ. ಆದ್ರೆ ನಾನು ಯಾರ ಪರವೂ ಅಲ್ಲ ಎಂದು ಸ್ಪಷ್ಟನೆ ಕೊಟ್ಟರು.

ಒಂದು ವೇಳೆ ನ್ಯಾಯಾಲಯ ಈ ಅಸಾಂವಿಧಾನಿಕ ಕಾನೂನನ್ನು ಸಾಂವಿಧಾನಿಕ ಎಂದು ಪರಿಗಣಿಸಿ ಮೋದಿ-ಶಾ ನಿರ್ಧಾರವನ್ನು ಎತ್ತಿಹಿಡಿದರೆ ಅದು ಜಾತ್ಯಾತೀತೆಯ ನಾಶಕ್ಕೆ ಕಾರಣವಾಗಲಿದೆ. ಇದು ಮುಸ್ಲಿಮರನ್ನು ಹೆದರಿಸಲು ಹಾಗೂ ಬೆದರಿಸಲು ಜಾರಿಗೆ ತಂದಿರುವ ಕಾನೂನಾಗಿದೆ ಎಂದು ಟೀಕಿಸಿದರು.

ABOUT THE AUTHOR

...view details