ಕರ್ನಾಟಕ

karnataka

ETV Bharat / bharat

'ಪಾಕಿಸ್ತಾನಿಯರು-ರೋಹಿಂಗ್ಯಾಗಳು ಭಾರತಕ್ಕೆ ಬರುವುದಾದರೆ, ನಾವೇಕೆ ಬೆಳಗಾವಿಗೆ ಹೋಗಬಾರದು?' - ನಾವೇಕೆ ಬೆಳಗಾವಿಗೆ ಹೋಗಬಾರದು ಸಂಜಯ್ ರಾವತ್ ಪ್ರಶ್ನೆ

ಬೆಳಗಾವಿಗೆ ಭೇಟಿ ನೀಡಲು ಉದ್ದೇಶಿಸಿದ್ದ ನನಗೆ ಕರ್ನಾಟಕ ಸರ್ಕಾರ ನಿಷೇಧ ಹೇರಿದೆ. ಆದರೂ ನಾನು ಬೆಳಗಾವಿಗೆ ಭೇಟಿ ನೀಡುತ್ತೇನೆ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಹೇಳಿದ್ದಾರೆ.

why can't we visit Belgaum sanjay raut,ಬೆಳಗಾವಿ ಬಗ್ಗೆ ಸಂಜಯ್ ರಾವತ್ ಹೇಳಿಕೆ
ಸಂಜಯ್ ರಾವತ್

By

Published : Jan 18, 2020, 2:57 PM IST

Updated : Jan 18, 2020, 4:00 PM IST

ಮುಂಬೈ(ಮಹಾರಾಷ್ಟ್ರ):ಪಾಕಿಸ್ತಾನದವರು ಮತ್ತು ರೋಹಿಂಗ್ಯಾಗಳು ಭಾರತಕ್ಕೆ ಬರುವುದಾದರೆ ನಾವು ಬೆಳಗಾವಿಗೆ ಹೋಗುವುದರಲ್ಲಿ ತಪ್ಪೇನಿದೆ ಎಂದು ಶಿವಸೇನೆ ಪಕ್ಷದ ನಾಯಕ ಸಂಜಯ್ ರಾವತ್ ಪ್ರಶ್ನಿಸಿದ್ದಾರೆ.

ಸಂಜಯ್ ರಾವತ್, ಶಿವಸೇನೆ ನಾಯಕ

ಸಂಜಯ್ ರಾವತ್​ ಬೆಳಗಾವಿಗೆ ಭೇಟಿ ನೀಡುವುದನ್ನು ಕರ್ನಾಟಕದಲ್ಲಿರುವ ಬಿಜೆಪಿ ಸರ್ಕಾರ ನಿಷೇಧಿಸಿದೆ ಎಂದು ಆರೋಪಿಸಿರುವ ಅವರು, ಪಾಕಿಸ್ತಾನದವರು ಮತ್ತು ರೋಹಿಂಗ್ಯಾಗಳು ಭಾರತಕ್ಕೆ ಬರುವುದಾದರೆ ನಾವು ಬೆಳಗಾವಿಗೆ ಭೇಟಿ ನೀಡುವುದರಲ್ಲಿ ತಪ್ಪೇನಿದೆ? ಎರಡೂ ರಾಜ್ಯಗಳ ನಡುವೆ ವಿವಾದ ಇರುವುದು ಸತ್ಯ. ಆದರೆ, ಒಬ್ಬರಿಗೊಬ್ಬರು ಭೇಟಿ ನೀಡುವುದನ್ನು ನಿಷೇಧಿಸಿದರೆ ಹೇಗೆ? ಎಂದು ಪ್ರಶ್ನಿಸಿದ್ದಾರೆ.

ಬೆಳಗಾವಿಯಲ್ಲಿ ಸಾಂಸ್ಕೃತಿಕ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜನರೊಂದಿಗೆ ಮಾತನಾಡಬೇಕು ಎಂದುಕೊಂಡಿದ್ದೆ. ಆದರೆ ಇಲ್ಲಿನ ಸರ್ಕಾರ ನನ್ನ ಭೇಟಿಯನ್ನು ನಿಷೇಧಿಸಿದೆ. ನಿಷೇಧ ಇದ್ದರೆ ಇರಲಿ, ನಾನು ಬೆಳಗಾವಿಗೆ ಹೋಗಿ ಜನರನ್ನ ಭೇಟಿ ಮಾಡುತ್ತೇನೆ ಎಂದಿದ್ದಾರೆ.

Last Updated : Jan 18, 2020, 4:00 PM IST

ABOUT THE AUTHOR

...view details