ಕರ್ನಾಟಕ

karnataka

ETV Bharat / bharat

ಕಾಂಗ್ರೆಸ್ ಅಧಿಕಾರದಲ್ಲಿರುವ ರಾಜ್ಯಗಳೇಕೆ ಮೊದಲು ಲಾಕ್​ಡೌನ್ ವಿಸ್ತರಿಸಿದವು?: ರಾಗಾಗೆ ಬಿಜೆಪಿ ಪ್ರಶ್ನೆ - ಕಾಂಗ್ರೆಸ್​​ ನಾಯಕ ರಾಹುಲ್​ ಗಾಂಧಿ

ಕೋವಿಡ್​ 19 ಹರಡುವಿಕೆ ತಡೆಗಟ್ಟಲು ಲಾಕ್​ಡೌನ್​ ಪರಿಹಾರವಲ್ಲ ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್​​ ನಾಯಕ ರಾಹುಲ್​ ಗಾಂಧಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ತಿರುಗೇಟು ನೀಡಿದ್ದಾರೆ.

lockdown
ರಾಗಾಗೆ ಬಿಜೆಪಿ ಪ್ರಶ್ನೆ

By

Published : Apr 16, 2020, 8:16 PM IST

ನವದೆಹಲಿ:ಕೊರೊನಾ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಲಾಕ್​ಡೌನ್​ ಪರಿಹಾರವಲ್ಲ ಎಂಬ ಕಾಂಗ್ರೆಸ್​​ ನಾಯಕ ರಾಹುಲ್​ ಗಾಂಧಿ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ, ಹಾಗಾದರೆ ಕಾಂಗ್ರೆಸ್​ ಪಕ್ಷ ಅಧಿಕಾರದಲ್ಲಿರುವ ರಾಜ್ಯಗಳು ಯಾಕೆ ಕೇಂದ್ರ ಸರ್ಕಾರದ ಆದೇಶದ ಮೊದಲೇ ಲಾಕ್​ಡೌನ್​ ಅವಧಿ ವಿಸ್ತರಿಸಿದವು ಎಂದು ಪ್ರಶ್ನಿಸಿದ್ದಾರೆ.

ಇಂದು ವಿಡಿಯೋ ಕಾನ್ಫರೆನ್ಸ್​ ಮೂಲಕ ಸುದ್ದಿಗೋಷ್ಠಿ ನಡೆಸಿದ್ದ ರಾಹುಲ್​ ಗಾಂಧಿ, ಕೋವಿಡ್​ 19 ಹರಡುವಿಕೆ ತಡೆಗಟ್ಟಲು ಲಾಕ್​ಡೌನ್​ ಪರಿಹಾರವಲ್ಲ. ಲಾಕ್​ಡೌನ್​ ಒಂದು ವಿರಾಮದ ಬಟನ್​ ಅಷ್ಟೆ. ಇದಕ್ಕೆ ಪರಿಣಾಮಕಾರಿ ಕೋವಿಡ್​ 19 ಪರೀಕ್ಷೆಯ ಅವಶ್ಯಕತೆಯಿದೆ. ವಲಸಿಗರ ರಕ್ಷಣೆ, ಆಹಾರ ಭದ್ರತೆ, ಬಡವರಿಗೆ ಆರ್ಥಿಕ ನೆರವು ನೀಡಲು ಯೋಜನೆಗಳನ್ನು ಜಾರಿಗೆ ತರುವ ಕುರಿತು ಕೇಂದ್ರವು ಕಾರ್ಯತಂತ್ರ ರೂಪಿಸುವ ಅಗತ್ಯವಿದೆ ಎಂದು ಸಲಹೆ ನೀಡಿದ್ದರು.

ಇದಕ್ಕೆ ಪ್ರತಿಕ್ರಯಿಸಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಲಾಕ್​ಡೌನ್​ ಪರಿಹಾರವಲ್ಲ ಎಂದರೆ ಕಾಂಗ್ರೆಸ್​ ಪಕ್ಷ ಅಧಿಕಾರದಲ್ಲಿರುವ ರಾಜ್ಯಗಳು ಯಾಕೆ ಕೇಂದ್ರ ಸರ್ಕಾರ ಲಾಕ್​ಡೌನ್​ ಅವಧಿ ವಿಸ್ತರಿಸುವ ಮುನ್ನವೇ ಲಾಕ್​ಡೌನ್ ವಿಸ್ತರಿಸಿದವು? ಎಂದು ಕೇಳಿದ್ದಾರೆ.

ತೀವ್ರವಾಗಿ ಹಾನಿಗೊಳಗಾದ ಇತರ ಕೊರೊನಾ ಪೀಡಿತ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತವು ಕೋವಿಡ್​ 19 ಬಿಕ್ಕಟ್ಟನ್ನು ಗಮನಾರ್ಹವಾಗಿ ಎದುರಿಸಿದೆ ಎಂಬುದನ್ನು ಡೇಟಾ ಸಹಿತ ಬಿಜೆಪಿಯ ಅಧಿಕೃತ ಟ್ವಿಟರ್ ಹ್ಯಾಂಡಲ್ ತಿಳಿಸಿದೆ. ಭಾರತದಲ್ಲಿನ ಒಂದು ದಶಲಕ್ಷ ಜನಸಂಖ್ಯೆಗೆ ಕೇವಲ ಒಂಬತ್ತು ಪ್ರಕರಣಗಳು ಹಾಗೂ 0.3 ಸಾವುಗಳು ಎಂಬುದನ್ನು ಉಲ್ಲೇಖಿಸಿದೆ.

ABOUT THE AUTHOR

...view details