ಕರ್ನಾಟಕ

karnataka

ETV Bharat / bharat

ಬಿಜೆಪಿ ನನ್ನನ್ನು ಬಂಧಿಸಿದ್ರೂ ಕೂಡ ಜೈಲಿನಲ್ಲಿದ್ದೇ ಚುನಾವಣೆ ಗೆಲ್ಲುತ್ತೇನೆ : ಮಮತಾ ಬ್ಯಾನರ್ಜಿ - if arrests me, I will ensure TMC victory in polls from jail

ನಾನು ಬಿಜೆಪಿ ಅಥವಾ ಅದರ ಏಜೆನ್ಸಿಗಳಿಗೆ ಹೆದರುವುದಿಲ್ಲ. ಅವರಿಗೆ ಧೈರ್ಯವಿದ್ದರೆ ನನ್ನನ್ನು ಬಂಧಿಸಿ ಜೈಲಿಗೆ ಹಾಕಲಿ. ನಾನು ಜೈಲಿನಿಂದಲೇ ಚುನಾವಣೆಯಲ್ಲಿ ಹೋರಾಡುತ್ತೇನೆ..

Mamata
Mamata

By

Published : Nov 25, 2020, 3:55 PM IST

ಪಶ್ಚಿಮ ಬಂಗಾಳ :ಟಿಎಂಸಿ ಶಾಸಕರನ್ನು ಬೇಟೆಯಾಡಲು ಬಿಜೆಪಿ ಯತ್ನಿಸುತ್ತಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಅಧಿಕಾರಕ್ಕೆ ಬರಬಹುದು ಎಂಬ ಭ್ರಮೆಯಲ್ಲಿದೆ. ಆದರೆ, ಅದು ಕನಸಾಗಿಯೇ ಉಳಿಯಲಿದೆ.

ಬಿಜೆಪಿ ಕೆಲ ಟಿಎಂಸಿ ಶಾಸಕರಿಗೆ ಲಂಚ ನೀಡಲು ಪ್ರಯತ್ನಿಸುತ್ತಿದೆ ಎಂದ ಅವರು, ನೇರವಾಗಿ ಯಾರ ಹೆಸರನ್ನು ಪ್ರಸ್ತಾಪಿಸದೆ ಆರೋಪಿಸಿದರು.

ನಾನು ಬಿಜೆಪಿಯವರಿಗೆ ಬಹಳ ಸ್ಪಷ್ಟವಾಗಿ ಹೇಳುತ್ತೀದ್ದೇನೆ. ಇಂತಹದಕ್ಕೆಲ್ಲಾ ನಾನು ಹೆದರುವುದಿಲ್ಲ, ಬಿಜೆಪಿ ಅಥವಾ ಅದರ ಏಜೆನ್ಸಿಗಳು ನನ್ನನ್ನು ಬಂಧಿಸಿದರೂ ಕೂಡ ನಾನು ಜೈಲಿನಿಂದಲೇ ಚುನಾವಣೆಗಳನ್ನು ಎದುರಿಸಿ ಗೆಲ್ಲುತ್ತೇನೆ.

ಟಿಎಂಸಿಯ ವಿಜಯವನ್ನು ಖಚಿತಪಡಿಸಿಕೊಳ್ಳಿ ಎಂದು ಕೋವಿಡ್-19 ನಂತರ ನಡೆದ ಮೊದಲ ಸಾರ್ವಜನಿಕ ಸಭೆಯಲ್ಲಿ ಬಿಜೆಪಿ ವಿರುದ್ಧ ಬ್ಯಾನರ್ಜಿ ಗುಡುಗಿದ್ದಾರೆ.

ABOUT THE AUTHOR

...view details