ಶ್ರೀನಗರ(ಜಮ್ಮು ಕಾಶ್ಮೀರ): ಉತ್ತರ ಕಾಶ್ಮೀರದಲ್ಲಿ ರೋಡ್ ಓಪನಿಂಗ್ ಪಾರ್ಟಿ (ಆರ್ಒಪಿ) ಗಾರ್ಡ್ಗಳ ತಪಾಸಣೆ ವೇಳೆ ಸುಧಾರಿತ ಸ್ಫೋಟಕ ಸಾಧನವನ್ನು(ಐಇಡಿ) ವಶಪಡಿಸಿಕೊಂಡಿದೆ. ಇದರಿಂದಾಗಿ ಭಾರಿ ಅವಘಡ ತಪ್ಪಿದ್ದು, ಉಗ್ರರ ಸಂಚು ವಿಫಲವಾಗಿದೆ.
ಉತ್ತರ ಕಾಶ್ಮೀರ ಸುಧಾರಿತ ಸ್ಫೋಟಕ ವಶ: ಉಗ್ರರ ಸಂಚು ವಿಫಲ - ರೋಡ್ ಓಪನಿಂಗ್ ಪಾರ್ಟಿ
ರೋಡ್ ಓಪನಿಂಗ್ ಪಾರ್ಟಿ ತಪಾಸಣೆ ವೇಳೆ ಸುಧಾರಿತ ಸ್ಫೋಟಕ ಸಾಧನ ಪತ್ತೆಯಾದ ಘಟನೆ ಉತ್ತರ ಕಾಶ್ಮೀರದಲ್ಲಿ ನಡೆದಿದೆ.

ಐಇಡಿ ವಶಕ್ಕೆ
ಬಾರಾಮುಲ್ಲಾ- ಹಂದ್ವಾರ ಮುಖ್ಯರಸ್ತೆಯ ಲದೂರಾ ಲಫಿಯಾಬಾಗ್ ಎಂಬಲ್ಲಿ ತಪಾಸಣೆ ವೇಳೆ ಸ್ಫೋಟಕ ಪತ್ತೆಯಾಗಿದ್ದು, ಸ್ಥಳಕ್ಕೆ ಬಾಂಬ್ ನಿಗ್ರಹ ದಳ ಭೇಟಿ ನೀಡಿ, ಕಾರ್ಯಾಚರಣೆಯಲ್ಲಿ ತೊಡಗಿದೆ.