ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಉಗ್ರರು ಹುದುಗಿಸಿಟ್ಟಿದ್ದ ಸುಧಾರಿತ ಸ್ಫೋಟಕ ಸಾಧನ (ಐಇಡಿ)ವನ್ನು ಭದ್ರತಾ ಪಡೆ ವಶಪಡಿಸಿಕೊಂಡಿದ್ದು, ದೊಡ್ಡ ದುರಂತವನ್ನು ತಪ್ಪಿಸಲಾಗಿದೆ.
ಪುಲ್ವಾಮಾದಲ್ಲಿ ಉಗ್ರರು ಹುದುಗಿಸಿಟ್ಟಿದ್ದ ಐಇಡಿ ವಶಕ್ಕೆ: ತಪ್ಪಿದ ದುರಂತ - ಜಮ್ಮು ಮತ್ತು ಕಾಶ್ಮೀರ
ಪುಲ್ವಾಮಾದ ತುಜನ್ ಗ್ರಾಮದ ಬಳಿ ಸೇತುವೆಯ ಕೆಳಗೆ ಉಗ್ರರು ಹುದುಗಿಸಿಟ್ಟಿದ್ದ ಸುಧಾರಿತ ಸ್ಫೋಟಕ ಸಾಧನ (ಐಇಡಿ)ವನ್ನು ಭದ್ರತಾ ಪಡೆ ವಶಪಡಿಸಿಕೊಂಡಿದೆ.
ಐಇಡಿ
ಭದ್ರತಾ ಪಡೆಗಳ ವಾಹನಗಳು ಹಾದುಹೋಗುವ ಮಾರ್ಗಗಳನ್ನು ಗುರಿಯಾಗಿಸಿಕೊಂಡ ಉಗ್ರರು ಪುಲ್ವಾಮಾದ ತುಜನ್ ಗ್ರಾಮದ ಬಳಿ ಸೇತುವೆಯ ಕೆಳಗೆ ಐಇಡಿ ಇಟ್ಟಿದ್ದಾರೆ. ಇದನ್ನು ಪತ್ತೆ ಮಾಡಿ, ವಶಪಡಿಸಿಕೊಂಡ ಬಳಿಕ ಈ ಪ್ರದೇಶದಲ್ಲಿ ಜನರ ಸಂಚಾರಕ್ಕೆ ಪೊಲೀಸರು ನಿರ್ಬಂಧ ವಿಧಿಸಿದ್ದು, ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಈ ತಿಂಗಳ ಆರಂಭದಲ್ಲಿ ಬಾರಾಮುಲ್ಲಾ ಜಿಲ್ಲೆಯ ಪತ್ತನ್ ಪ್ರದೇಶದಲ್ಲಿ ಪತ್ತೆಯಾಗಿದ್ದ ಐಇಡಿಯನ್ನು ಬಾಂಬ್ ನಿಷ್ಕ್ರಿಯ ದಳ ನಾಶಪಡಿಸಿತ್ತು.