ನವದೆಹಲಿ: ಕೌನ್ಸಿಲ್ ಫಾರ್ ದಿ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಷನ್ (ಸಿಐಎಸ್‌ಸಿಇ)ಗಳಾದ ಐಸಿಎಸ್‌ಇ ಹಾಗೂ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ (ಐಎಸ್‌ಸಿ) ಫಲಿತಾಂಶ ಇಂದು ಪ್ರಕಟವಾಗಿದೆ.
ಇಂದು ಮಧ್ಯಾಹ್ನ 3 ಗಂಟೆಗೆ ಫಲಿತಾಂಶ ಪ್ರಕಟವಾಗಿದ್ದು, ಜುಲೈ 16ರ ವರೆಗೂ ವಿದ್ಯಾರ್ಥಿಗಳು ವೆಬ್ಸೈಟ್ನಲ್ಲಿ ರಿ-ಚೆಕ್ ಮಾಡಬಹುದಾಗಿದೆ. ವಿದ್ಯಾರ್ಥಿಗಳ ಆಂತರಿಕ ಮೌಲ್ಯಮಾಪನದ ಅಂಕಗಳ ಆಧಾರದ ಮೇಲೆ ಫಲಿತಾಂಶ ಪ್ರಕಟಿಸಿದ್ದು, ಯಾವುದೇ ಮೆರಿಟ್ ಲಿಸ್ಟ್ ಇರುವುದಿಲ್ಲ ಎಂದು ಮಂಡಳಿಯ ಕಾರ್ಯದರ್ಶಿ ಗೆರ್ರಿ ಅರಾಥೂನ್ ಹೇಳಿದ್ದಾರೆ.