ಕರ್ನಾಟಕ

karnataka

ETV Bharat / bharat

ಕೇರಳದ ಸಂಸ್ಥೆ ಅಭಿವೃದ್ಧಿಪಡಿಸಿದ ಪರೀಕ್ಷಾ ವಿಧಾನಕ್ಕೆ ಅನುಮೋದನೆ ದೊರಕಲಿ: ಶಶಿ ತರೂರ್ ಆಗ್ರಹ

ಕಾಂಗ್ರೆಸ್ ಸಂಸದ ಶಶಿ ತರೂರ್, ಕೇರಳದ ಸಂಸ್ಥೆಗಳು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಪರೀಕ್ಷಾ ವಿಧಾನಗಳನ್ನು ಬಳಸುವುದು ಹೆಚ್ಚು ನ್ಯಾಯಯುತವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

taroor

By

Published : Apr 25, 2020, 2:12 PM IST

ತಿರುವನಂತಪುರಂ: ಚೀನಾದಿಂದ ಆಮದು ಮಾಡಿಕೊಳ್ಳುವ ದೋಷಯುಕ್ತ ಕೊರೊನಾ ವೈರಸ್ ಪರೀಕ್ಷಾ ಕಿಟ್‌ಗಳನ್ನು ಅವಲಂಬಿಸುವ ಬದಲು, ಕೇರಳದ ಸಂಸ್ಥೆಗಳು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಪರೀಕ್ಷಾ ವಿಧಾನಗಳನ್ನು ಬಳಸುವುದು ಹೆಚ್ಚು ನ್ಯಾಯಯುತವಾಗಿದೆ ಎಂದು ಸ್ಥಳೀಯ ಸಂಸದ ಶಶಿ ತರೂರ್ ಹೇಳಿದ್ದಾರೆ.

ಈ ವಿಧಾನವನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಅನುಮೋದಿಸಬೇಕು ಎಂದು ತರೂರ್ ಹೇಳಿದ್ದಾರೆ.

ಶ್ರೀ ಚಿತ್ರ ತಿರುಣಾಲ್ ಇನ್ಸ್ಟಿಟ್ಯೂಟ್ ಫಾರ್ ಮೆಡಿಕಲ್ ಸೈನ್ಸಸ್ ಅಂಡ್ ಟೆಕ್ನಾಲಜೀಸ್ ತಯಾರಿಸಿದ ಆರ್​ಟಿ-ಲ್ಯಾಂಪ್ ಪರೀಕ್ಷೆ, ವೇಗದ ಮತ್ತು ಅಗ್ಗದ ಪರೀಕ್ಷೆಯಾಗಿದೆ. ಇದರ ಅನುಮೋದನೆಗಾಗಿ ಸರಕಾರ ಯಾಕೆ ಸಮಯ ತೆಗೆದುಕೊಳ್ಳುತ್ತಿದೆ ಎಂದು ಶಶಿ ತರೂರ್ ಟ್ವೀಟ್ ಮಾಡಿದ್ದಾರೆ.

ABOUT THE AUTHOR

...view details