ಪುಣೆ /ಮಹಾರಾಷ್ಟ್ರ: ದೇಶದಲ್ಲೆಡೆ ಕಿಲ್ಲರ್ ಕೊರೊನಾ ತನ್ನ ಅಟ್ಟಹಾಸ ಮುಂದುವರಿಸಿದೆ.
ಕೋವಿಡ್ 19 ಪರೀಕ್ಷಾ ಕಿಟ್ ಅಭಿವೃದ್ಧಿ ಪಡಿಸಿದ ICMR - ಕೊವಿಡ್ 19 ಪರೀಕ್ಷಾ ಕಿಟ್ ಅಭಿವೃದ್ಧಿ ಪಡಿಸಿದ ICMR
ಪುಣೆಯ ಮೈಲ್ಯಾಬ್ ಡಿಸ್ಕವರಿ ಸೆಲ್ಯೂಷನ್ ಪ್ರೈವೇಟ್ ಲಿಮಿಟೆಡ್, ಕೋವಿಡ್ 19 ಪರೀಕ್ಷಾ ಕಿಟ್ ಅನ್ನು ಅಭಿವೃದ್ಧಿ ಪಡಿಸಿದೆ. ಇದನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಕೂಡ ಅನುಮೋದಿಸಿದೆ.
ಪುಣೆಯ ಮೈಲ್ಯಾಬ್ ಡಿಸ್ಕವರಿ ಸೆಲ್ಯೂಷನ್ ಪ್ರೈವೇಟ್ ಲಿಮಿಟೆಡ್, ಕೋವಿಡ್ 19 ಪರೀಕ್ಷಾ ಕಿಟ್ ಅನ್ನು ಅಭಿವೃದ್ಧಿ ಪಡಿಸಿದೆ. ಇದನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಕೂಡ ಅನುಮೋದಿಸಿದೆ. ಒಂದು ಕಿಟ್ನ ಬೆಲೆ 80 ಸಾವಿರ ರೂಪಾಯಿಯಾಗಿದ್ದು, 100 ರೋಗಿಗಳನ್ನ ಪರೀಕ್ಷಿಸಬಹುದಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಜ್ಞಾನಿ ರಂಜಿತ್ ದೇಸಾಯಿ, ಸಾರ್ವಜನಿಕರಿಗಾಗಿ ಕಿಟ್ಗಳ ಉತ್ಪಾದನೆಯನ್ನ ಹೆಚ್ಚಿಸಲು ಶ್ರಮಿಸುತ್ತಿದ್ದೇವೆ ಎಂದರು.
ಈಗಾಗಲೇ ದೇಶದಲ್ಲಿ 500 ಕ್ಕೂ ಹೆಚ್ಚು ಕೊರೊನಾ ಸೋಂಕಿನ ಪ್ರಕರಣಗಳು ಬೆಳಕಿಗೆ ಬಂದಿದ್ದು, 10 ಮಂದಿ ಮೃತಪಟ್ಟಿದ್ದಾರೆ.