ಹೈದರಾಬಾದ್:ಮಹಾಮಾರಿ ಕೊರೊನಾ ವೈರಸ್ಗೆ ಭಾರತದಲ್ಲಿ ಕಂಡು ಹಿಡಿಯಲಾಗಿರುವ ಕೊವ್ಯಾಕ್ಸಿನ್ ಫಲಿತಾಂಶ ಆಗಸ್ಟ್ 15ರೊಳಗೆ ರಿಲೀಸ್ ಮಾಡುವಂತೆ ತಿಳಿಸಲಾಗಿದ್ದು, ಇದಕ್ಕೆ ತಜ್ಞರು ಆತಂಕ ವ್ಯಕ್ತಪಡಿಸುತ್ತಿದ್ದಂತೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ಡೆಡ್ಲೈನ್ ಸಮರ್ಥಿಸಿಕೊಂಡಿದೆ.
ಲಸಿಕೆ ಈಗಾಗಲೇ ಮಾನವ ಪ್ರಯೋಗಕ್ಕೆ ನೀಡಲಾಗಿದ್ದು, ಮೊದಲ ಹಾಗೂ ಎರಡನೇ ಹಂತದ ಮಾನವ ಪ್ರಯೋಗ ಕಾರ್ಯಕ್ಕೆ ಭಾರತ್ ಬಯೋಟೆಕ್ಗೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಅನುಮೋದನೆ ನೀಡಿದೆ. ತ್ವರಿತಗತಿಯಲ್ಲಿ ಮನಷ್ಯರ ಮೇಲೆ ಪ್ರಯೋಗ ಮಾಡುವಂತೆ ಐಸಿಎಂಆರ್ಗೆ ಗಡುವು ನೀಡಿದೆ. ಇದರ ಬೆನ್ನಲ್ಲೇ ಕೆಲವೆಡೆ ಭಿನ್ನಾಭಿಪ್ರಾಯ ವ್ಯಕ್ತವಾಗಿತ್ತು.