ಕರ್ನಾಟಕ

karnataka

ETV Bharat / bharat

ಕುಲಭೂಷಣ ಗಲ್ಲು ಶಿಕ್ಷೆ ಅಮಾನತು: ಭಾರತದ ಪರ ತೀರ್ಪು ನೀಡಿದ ಅಂತಾರಾಷ್ಟ್ರೀಯ ಕೋರ್ಟ್​!

ಅಂತಾರಾಷ್ಟ್ರೀಯ ಕೋರ್ಟ್​​ನಲ್ಲಿ ಕುಲಭೂಷಣ​​ ಪರ ತೀರ್ಪು ಬಂದಿದ್ದು, ಇದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಪಾಕ್​ ವಿರುದ್ಧ ಮತ್ತೊಂದು ಗೆಲುವು ದಾಖಲಾಗಿದೆ.

ಕುಲಭೂಷಣ ತೀರ್ಪು

By

Published : Jul 17, 2019, 6:03 PM IST

Updated : Jul 17, 2019, 7:10 PM IST

ನವದೆಹಲಿ:ಬೇಹುಗಾರಿಕೆ ನಡೆಸುತ್ತಿದ್ದಾರೆ ಎಂಬ ಆರೋಪದ ಮೇಲೆ ಪಾಕ್​ನಿಂದ ಬಂಧಿತರಾಗಿರುವ ಭಾರತದ ಮಾಜಿ ನೌಕಾಧಿಕಾರಿ ಕುಲಭೂಷನ್​ ಜಾಧವ್​ ಅವರ ತೀರ್ಪು ಹೊರಬಿದಿದ್ದು, ಭಾರತದ ಪರ ತೀರ್ಪು ಬಂದಿದೆ.

  • 16 ಜಡ್ಜ್​ಗಳ ಪೈಕಿ 15 ಜಡ್ಜ್​ ಭಾರತದ ಪರ ತೀರ್ಪು ನೀಡಿದ್ದು, ಗಲ್ಲು ಶಿಕ್ಷೆಯನ್ನ ಮರುಪರಿಶೀಲನೆ ನಡೆಸುವಂತೆ ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಕೋರ್ಟ್​​ ಸೂಚನೆ ನೀಡಿದೆ.
    ಅಂತಾರಾಷ್ಟ್ರೀಯ ಕೋರ್ಟ್​​ನಿಂದ ತೀರ್ಪು
  • ಕುಲಭೂಷಣ್ ಪ್ರಕರಣದಲ್ಲಿ ಪಾಕ್​ ವಿಯನ್ನಾ ಒಪ್ಪಂದದ ನಿಯಮಗಳನ್ನ ಉಲ್ಲಂಘನೆ ಮಾಡಿದೆ.
  • ಪಾಕ್​ ಸರ್ಕಾರ ಕುಲಭೂಷಣ್​ ಜಾಧವ್​ಗೆ ಯಾವುದೇ ಕಾನೂನು ನೆರವು ನೀಡಿಲ್ಲ
    ಮಹತ್ವದ ತೀರ್ಪು
  • ಭಾರತ ನೂರಾರು ಬಾರಿ ಮನವಿ ಮಾಡಿದರೂ ಪಾಕ್​ ಕುಲಭೂಷಣ್​ ನೆರವಿಗೆ ಧಾವಿಸಿರಲಿಲ್ಲ ಎಂಬುದು ವಾದ-ಪ್ರತಿವಾದಗಳಿಂದ ಸಾಬೀತು.
  • ಪಾಕ್​ ಆಕ್ಷೇಪಣೆಗಳನ್ನ ತಿರಸ್ಕಾರ ಮಾಡಿದ ಅಂತಾರಾಷ್ಟ್ರೀಯ ಕೋರ್ಟ್​​
  • ನೆದರ್​ಲೆಂಡ್​ನ ಹೇಗ್​ನಲ್ಲಿರುವ ಅಂತಾರಾಷ್ಟ್ರೀಯ ಕೋರ್ಟ್​
  • ಗಲ್ಲು ಶಿಕ್ಷೆ ಆದೇಶ ಮರುಪರಿಶೀಲನೆ ನಡೆಸುವಂತೆ ಪಾಕ್​ಗೆ ಆದೇಶ
  • ಪಾಕಿಸ್ತಾನ ಕುಲಭೂಷಣ್​ ಜಾಧವ್​ಗೆ ಗಲ್ಲುಶಿಕ್ಷೆ ವಿಧಿಸುವಂತಿಲ್ಲ
  • ಪಾಕಿಸ್ತಾನ ಜಡ್ಜ್​ನಿಂದ ಮಾತ್ರ ಈ ಆದೇಶಕ್ಕೆ ವಿರೋಧ

ಇದಕ್ಕೂ ಮೊದಲು ಇದೇ ವಿಷಯಕ್ಕೆ ಸಂಬಂಧಿಸಿದಂತೆ ಗೃಹ ಖಾತೆ ರಾಜ್ಯ ಸಚಿವ ಕಿಶನ್​ ರೆಡ್ಡಿ ಮಾತನಾಡಿದ್ದು, ಅಭಿನಂದನ್​ ರೀತಿಯಲ್ಲಿ ಅವರು ಪಾಕ್​ನಿಂದ ಭಾರತಕ್ಕೆ ವಾಪಸ್​ ಬರಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಳೆದ ಕೆಲ ತಿಂಗಳ ಹಿಂದೆ ಪಾಕ್​ ವಿಮಾನ ಹೊಡೆದುರುಳಿಸಿ ಅವರ ಗಡಿಯಲ್ಲಿ ಬಂಧಿಯಾಗಿದ್ದ ಭಾರತದ ವಾಯುಸೇನೆಯ ವಿಂಗ್ ಕಮಾಂಡರ್​ ಅಭಿನಂದನ್​ ಅವರನ್ನ ಪಾಕ್​ ಸಕಲ ಗೌರವಗಳೊಂದಿಗೆ ಭಾರತಕ್ಕೆ ವಾಪಸ್​ ಮಾಡಿತ್ತು.

ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್​ ಟ್ವೀಟ್ ಮಾಡಿ ಹರ್ಷ ವ್ಯಕ್ತಪಡಿಸಿದ್ದಾರೆ. ಇದು ಭಾರತಕ್ಕೆ ಸಂದ ಜಯ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಅಂತಾರಾಷ್ಟ್ರೀಯ ನ್ಯಾಯಾಲಯದ ತೀರ್ಪನ್ನ ತುಂಬು ಹೃದಯದಿಂದ ಗೌರವಿಸುತ್ತೇನೆ ಎಂದು ಟ್ಟೀಟ್​ ಮಾಡಿ ಸಂಭ್ರಮ ಪಟ್ಟಿದ್ದಾರೆ.

ಘಟನೆಯ ಕಾಲಾನುಕ್ರಮ:

* ಮಾ.25, 2016ರಂದು ಜಾಧವ್​ ಬಂಧನದ ವಿಚಾರ ಭಾರತಕ್ಕೆ ತಿಳಿಯಿತು

* ಏ.11, 2017ರಲ್ಲಿ ಪಾಕಿಸ್ತಾನಿ ಮಿಲಿಟರಿ ನ್ಯಾಯಾಲಯ ಜಾಧವ್​ಗೆ ಮರಣ ದಂಡನೆ ವಿಧಿಸಿತು.

* ಮೇ 8, 2017 ಭಾರತ ಅಂತರಾಷ್ಟ್ರೀಯ ನ್ಯಾಯಾಲಯದ (ಐಸಿಜೆ) ಮೊರೆ ಹೋಯಿತು.

* ಮೇ 15, 2017ರಲ್ಲಿ ಜಾಧವ್​ ಪ್ರಕರಣದಲ್ಲಿ ಐಸಿಜೆಯಲ್ಲಿ ಮೊದಲ ವಿಚಾರಣೆ

* ಮೇ 18, 2017 ಪಾಕ್​ ಮಿಲಿಟರಿ ನ್ಯಾಯಾಲಯ ನೀಡಿದ್ದ ಮರಣದಂಡೆನೆಗೆ ಐಸಿಜೆ ತಡೆ ಆದೇಶ ಹೊರಡಿಸಿತು.

* ಡಿ.18,2017ರಲ್ಲಿ ಪಾಕ್‌ಗೆ ತೆರಳಿದ ಜಾಧವ್​ ತಾಯಿ ಮತ್ತು ಮಡದಿ ಅವರನ್ನು ಭೇಟಿ ಮಾಡಿದರು.

* ಫೆ.19, 2019 ಐಸಿಜೆಯಲ್ಲಿ ಜಾಧವ್​ ಪ್ರಕರಣದ ವಿಚಾರಣೆ

* ಜು.17, 2019: ಕುಲಭೂಷಣ ಜಾಧವ್ ಪ್ರಕರಣದ ಅಂತಿಮ ತೀರ್ಪು ನಿಗದಿಯಾಗಿತ್ತು.

ಕುಲಭೂಷನ್​ ಪರವಾಗಿ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಭಾರತದ ಹರೀಶ್ ಸಾಳ್ವೆ ವಾದ ಮಂಡಿಸಿದ್ದು, ಕುಲಭೂಷಣ್ ಜಾಧವ್ ಬಂಧನ ಹಾಗೂ ನಂತರದ ಘಟನಾವಳಿಗಳಲ್ಲಿ ವಿಯೆನ್ನಾ ಒಪ್ಪಂದದ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ.

2016ರಲ್ಲಿ ಕುಲಭೂಷನ್​ ಯಾದವ್​ ಬಂಧನ ಮಾಡಿದ್ದ ಪಾಕಿಸ್ತಾನ ಮಿಲಿಟರಿ 2017ರಲ್ಲಿ ಅವರಿಗೆ ಮರಣ ದಂಡನೆ ವಿಧಿಸಿತ್ತು. ಆದರೆ, ಇದನ್ನ ಪ್ರಶ್ನಿಸಿ ಭಾರತ ಅಂತಾರಾಷ್ಟ್ರೀಯ ಕೋರ್ಟ್​ ಮೆಟ್ಟಿಲೇರಿತ್ತು. ಈಗಾಗಲೇ ವಾದ-ವಿವಾದ ಆಲಿಸಿರುವ ನ್ಯಾಯಾಲಯ ಇಂದು ತನ್ನ ಅಂತಿಮ ತೀರ್ಪು ಪ್ರಕಟ ಮಾಡಿದೆ.

Last Updated : Jul 17, 2019, 7:10 PM IST

ABOUT THE AUTHOR

...view details