ಕರ್ನಾಟಕ

karnataka

ETV Bharat / bharat

ಪಂದ್ಯ ಗೆಲ್ಲುವವರೆಗೂ ಸೂಪರ್​ ಓವರ್​​... ಐಸಿಸಿಯಿಂದ ಕೊನೆಗೂ ವಿಶ್ವಕಪ್​​ ನಿಯಮ ಬದಲು! - ಐಸಿಸಿ ವಿಶ್ವಕಪ್ ಕ್ರಿಕೆಟ್​​​​​

ಈ ಸಲದ ವಿಶ್ವಕಪ್​​ ಫೈನಲ್​​ನಲ್ಲಿ ವಿವಾದಿತ ರೂಪದಲ್ಲಿ ಇಂಗ್ಲೆಂಡ್​ ಚಾಂಪಿಯನ್​ ಆಗಿ ಹೊರಹೊಮ್ಮಿತ್ತು. ಅದರ ವಿರುದ್ಧ ಅನೇಕ ಟೀಕೆಗಳು ಕೇಳಿ ಬಂದಿದ್ದವು. ಘಟನೆ ನಡೆದ ಮೂರು ತಿಂಗಳ ಬಳಿಕ ಐಸಿಸಿ ತನ್ನ ನಿಯಮ ಬದಲಾವಣೆ ಮಾಡಿದೆ.

ವಿಶ್ವಕಪ್​ ಫೈನಲ್​ ಪಂದ್ಯ

By

Published : Oct 14, 2019, 11:49 PM IST

ಮುಂಬೈ:ಕಳೆದ ಜುಲೈ ತಿಂಗಳಲ್ಲಿ ನಡೆದಿದ್ದ ಐಸಿಸಿ ವಿಶ್ವಕಪ್ ಕ್ರಿಕೆಟ್​​​​​ ಸಿಕ್ಕಾಪಟ್ಟೆ ರೋಚಕತೆಯಿಂದ ಕೂಡಿತ್ತು. ಈ ಪಂದ್ಯದಲ್ಲಿ ನಿಗದಿತ 50 ಓವರ್​ಗಳಲ್ಲಿ ಇಂಗ್ಲೆಂಡ್​ ಹಾಗೂ ನ್ಯೂಜಿಲ್ಯಾಂಡ್​ ಸಮಬಲದ ಪ್ರದರ್ಶನ ನೀಡಿದ್ದರಿಂದ ಪಂದ್ಯ ಡ್ರಾ ಆಗಿತ್ತು. ನಂತರದ ಸೂಪರ್​ ಓವರ್​​ನಲ್ಲೂ ಇದೇ ಘಟನೆ ನಡೆದಿತ್ತು. ಆದರೆ ಬೌಂಡರಿ ಆಧಾರದ ಮೇಲೆ ಇಂಗ್ಲೆಂಡ್​ ತಂಡವನ್ನ ಚಾಂಪಿಯನ್​ ಎಂದು ಘೋಷಣೆ ಮಾಡಲಾಗಿತ್ತು.

ಐಸಿಸಿ ಈ ನಿಯಮ ಸಿಕ್ಕಾಪಟ್ಟೆ ಆಕ್ರೋಶಕ್ಕೆ ಕಾರಣವಾಗಿತ್ತು. ಹಾಗೂ ಬೌಂಡರಿ ನಿಯಮದ ವಿರುದ್ಧ ಅನೇಕ ಕ್ರೀಡಾಪಟುಗಳು ಸಿಡಿಮಿಡಿಗೊಂಡು ಜಂಟಿಯಾಗಿ ವಿಶ್ವಕಪ್​​ ವಿಜೇತ ತಂಡ ಎಂದು ಘೋಷಣೆ ಮಾಡಬೇಕಿತ್ತು ಎಂದಿತ್ತು. ಸದ್ಯ ಈ ನಿಯಮವನ್ನ ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ(ಐಸಿಸಿ) ಬದಲಾವಣೆ ಮಾಡಿದೆ.

ಐಸಿಸಿ ಪ್ರಯೋಜಕತ್ವದಲ್ಲಿ ನಡೆಯುವ ಟೂರ್ನಿಯಲ್ಲಿ ಗ್ರೂಪ್​ ಹಂತದ ಪಂದ್ಯಗಳಲ್ಲಿ ಈಗಾಗಲೇ ಚಲಾವಣೆಯಲ್ಲಿರುವ ನಿಯಮ ಜಾರಿಯಾಗಲಿದ್ದು, ಪಂದ್ಯ ಟೈ ಆದರೆ ಅಂಕ ಹಂಚಿಕೆ ಹಾಗೂ ಸೆಮಿಫೈನಲ್​ ಹಾಗೂ ಫೈನಲ್​​ನಲ್ಲಿ ಒಂದು ತಂಡ ಗೆಲುವವರೆಗೂ ಸೂಪರ್​ ಓವರ್​ ನಡೆಯಲಿದೆ. ಇಂದು ನಡೆದ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಏಕದಿನ ಹಾಗೂ ಟಿ20 ಪಂದ್ಯಗಳಲ್ಲಿ ಈ ನಿಯಮ ಜಾರಿಗೊಳ್ಳಲಿದೆ.

ಈಗಾಗಲೇ ಆಸ್ಟ್ರೇಲಿಯಾ ಕ್ರಿಕೆಟ್​ ಈ ನಿಯಮ ಜಾರಿಗೊಳಿಸಿದ್ದು, ಪುರುಷರು ಹಾಗೂ ಮಹಿಳೆಯರ ಬಿಗ್​ಬ್ಯಾಶ್​ ಟಿ-20 ಟೂರ್ನಿಗಳಲ್ಲಿ ಚಲಾವಣೆಯಲ್ಲಿದೆ.

ABOUT THE AUTHOR

...view details