ನವದೆಹಲಿ:ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಈಶಾನ್ಯ ದೆಹಲಿಯಲ್ಲಿನ ಹಿಂಸಾಚಾರದ ಸಂದರ್ಭದಲ್ಲಿ ಹತ್ಯೆಗೊಳಗಾಗದ ಇಂಟೆಲಿಜೆನ್ಸ್ ಬ್ಯೂರೋ ಸಿಬ್ಬಂದಿ ಅಂಕಿತ್ ಶರ್ಮಾ ಹತ್ಯೆ ಪ್ರಕರಣದ ಮರಣೋತ್ತರ ಪರೀಕ್ಷೆ ಇದೀಗ ಹೊರಬಿದ್ದಿದ್ದು, ಮಹತ್ವದ ಅಂಶಗಳು ಬೆಳಕಿಗೆ ಬಂದಿವೆ.
ಐಬಿ ಅಧಿಕಾರಿ ಅಂಕಿತ್ ಶರ್ಮಾ ಮರಣೋತ್ತರ ವರದಿ: 12 ಬಾರಿ ಇರಿತ, 45 ಗಾಯದ ಗುರುತು! - ಅಂಕಿತ್ ಶರ್ಮಾ ಮರಣೋತ್ತರ ವರದಿ
ಕಳೆದ ವಾರ ದೆಹಲಿಯಲ್ಲಿ ನಡೆದ ಹಿಂಸಾಚಾರದಲ್ಲಿ ಮೃತಪಟ್ಟ ದಕ್ಷ ಐಬಿ ಅಧಿಕಾರಿ ಅಂಕಿತ್ ಶರ್ಮಾ ಮರಣೋತ್ತರ ವರದಿ ಇದೀಗ ಬಹಿರಂಗಗೊಂಡಿದ್ದು, ಮಹತ್ವದ ಅಂಶ ಬಹಿರಂಗಗೊಂಡಿದೆ.

2017ನೇ ಬ್ಯಾಚ್ನ ಅಧಿಕಾರಿಯಾಗಿದ್ದ 26 ವರ್ಷದ ಅಂಕಿತ್ ಶರ್ಮಾ ಶವವನ್ನ ಪೊಲೀಸರು ನಿಗೂಢ ರೀತಿಯಲ್ಲಿ ಚಾಂದ್ಬಾಗ್ ಪ್ರದೇಶದಲ್ಲಿ ವಶಕ್ಕೆ ಪಡೆದುಕೊಂಡಿದ್ದರು. ಇದೇ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ ತಾಹೀರ್ ಹುಸೇನ್ ವಶಕ್ಕೆ ಪಡೆದುಕೊಳ್ಳಲಾಗಿತ್ತು. ಇದೀಗ ಮೃತದೇಹದ ಮರಣೋತ್ತರ ವರದಿ ಬಹಿರಂಗಗೊಂಡಿದ್ದು, ಚಾಕುವಿನಿಂದ 12 ಸಲ ಇರಿಯಲಾಗಿದ್ದು, 45 ಗಾಯದ ಗುರುತು ಕಂಡು ಬಂದಿವೆ ಎಂಬುದು ತಿಳಿದು ಬಂದಿದೆ.
ಅಂಕಿತ್ ಶರ್ಮಾ ಮೇಲೆ ಹರಿತಾದ ಚಾಕುವಿನಿಂದ ಹಲ್ಲೆ ಮಾಡಲಾಗಿದೆ ಎಂಬುದು ವರದಿಯಿಂದ ಹೊರಬಿದ್ದಿದೆ. ದೆಹಲಿ ಗಲಭೆಯಲ್ಲಿ ಸಾವನ್ನಪ್ಪಿರುವ ಅಂಕಿತ್ ಶರ್ಮಾ ಕುಟುಂಬಕ್ಕೆ ಈಗಾಗಲೇ ಕೇಜ್ರಿವಾಲ್ ಸರ್ಕಾರ 1 ಕೋಟಿ ರೂ ಪರಿಹಾರ ಘೋಷಣೆ ಮಾಡಿದೆ. ಇದೇ ಹಿಂಸಾಚಾರದಲ್ಲಿ ಹಿರಿಯ ಪೊಲೀಸ್ ಕಾನ್ಸ್ಟೇಬಲ್ ಒಬ್ಬರು ಸಾವನ್ನಪ್ಪಿದ್ದು, ಅಂಕಿತ್ ಶರ್ಮಾ ಕೊಲೆಗೆ ಕಾರಣವಾಗಿದ್ದ ವ್ಯಕ್ತಿ ಇವರ ಮೇಲೂ ಹಲ್ಲೆ ನಡೆಸಿದ್ದಾಗಿ ತಿಳಿದು ಬಂದಿದೆ.