ತಿರುವನಂತಪುರ:ಪತ್ರಕರ್ತನ ಬೈಕ್ ಮೇಲೆ ಕಾರು ಚಲಾಯಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ಶ್ರೀರಾಮ್ ವೆಂಕಟರಮಣ್ ಅವರನ್ನ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಸರ್ವೆ ಡೈರೆಕ್ಟರ್ ಶ್ರೀರಾಮ್ ವೆಂಕಟರಮಣ್ ಕಾರು ನಿಂತಿದ್ದ ಬೈಕ್ಗೆ ಗುದ್ದಿದ ಪರಿಣಾಮ ಸಿರಾಜ್ ಪತ್ರಿಕೆಯ ಪತ್ರಕರ್ತ ಕೆ.ಎಂ.ಬಶೀರ್ ಸಾವಿಗೀಡಗಿದ್ದರು. ಸಣ್ಣಪುಟ್ಟ ಗಾಯಗಳಿಗಿದ್ದ ಐಎಎಸ್ ಅಧಿಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.