ಕರ್ನಾಟಕ

karnataka

ದೇಶದ ವಾಯುಸೇನೆಯ ಭೀಮ, ಕಾರ್ಗಿಲ್ ಹೀರೋಗೆ ಹೃದಯಸ್ಪರ್ಶಿ ವಾಟರ್‌ ಸೆಲ್ಯೂಟ್‌!

By

Published : Dec 27, 2019, 12:35 PM IST

ಭಾರತೀಯ ವಾಯುಸೇನೆಗೆ ಭೀಷ್ಮಬಲ ತುಂಬಿದ್ದ ವಾಯುಸೇನೆಯ ಹೆಮ್ಮೆಯ ಮಿಗ್​​-27 ಅಧಿಕೃತವಾಗಿ ಸೇವೆಯಿಂದ ನಿವೃತ್ತಿಗೊಂಡಿದೆ.

IAF's MiG-27 takes to the skies for the last time
35 ವರ್ಷ ನಿರಂತರ ಸೇವೆ ಸಲ್ಲಿಸಿದ್ದ 'ಬಹದ್ದೂರ್​' ವಿದಾಯ

ಜೋಧಪುರ್​(ರಾಜಸ್ಥಾನ):1999ರಲ್ಲಿ ನಡೆದಿದ್ದ ಕಾರ್ಗಿಲ್​ ಯುದ್ಧದಲ್ಲಿ ಪಾಕಿಸ್ತಾನದ ಹುಟ್ಟಡಗಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದ ಭಾರತೀಯ ವಾಯುಪಡೆಯ ಮಿಗ್​​-27 ಯುದ್ಧ ವಿಮಾನ ಇಂದಿನಿಂದ ಹಾರಾಟದಿಂದ ವಿದಾಯ ಪಡೆದಿದೆ.

ಕಾರ್ಗಿಲ್​ ಯುದ್ಧದ ವೇಳೆ ರಷ್ಯಾ ನಿರ್ಮಿತ ಈ ಯುದ್ಧ ವಿಮಾನ ಮಹತ್ವದ ಕಾರ್ಯಾಚರಣೆ ನಡೆಸಿತ್ತು.

35 ವರ್ಷ ನಿರಂತರ ಸೇವೆ ಸಲ್ಲಿಸಿದ್ದ 'ಬಹದ್ದೂರ್​'ಗೆ ವಾಟರ್ ಸೆಲ್ಯೂಟ್‌

ರಾಜಸ್ಥಾನದ ಜೋಧಪುರ್​​ನಲ್ಲಿ ಕೊನೇಯ ಹಾರಾಟ ನಡೆಸುವ ಮೂಲಕ ಯುದ್ದ ವಿಮಾನ ಇತಿಹಾಸದ ಪುಟ ಸೇರಿದೆ. ಇಷ್ಟು ದಿನ ಭಾರತೀಯ ವಾಯುಪಡೆಯ ಬತ್ತಳಿಕೆಯಲ್ಲಿ ಪ್ರಮುಖ ಅಸ್ತ್ರವಾಗಿದ್ದ ಯುದ್ದ ವಿಮಾನ 'ಬಹದ್ದೂರ್'​ ಎಂದೇ ಖ್ಯಾತಿಗಳಿಸಿತ್ತು. ಇಂದು ಒಟ್ಟಿಗೆ ಏಳು ಮಿಗ್‌ 27 ವಿಮಾನಗಳು ಆಕಾಶದಲ್ಲಿ ಹಾರಾಟ ನಡೆಸುವ ಮೂಲಕ ತಮ್ಮ ಸೇವೆ ಕೊನೆಗೊಳಿಸಿವೆ. ಇದಾದ ಬಳಿಕ ವಾಯುಸೇನೆ ಅವುಗಳನ್ನು ನಿಷ್ಕ್ರೀಯಗೊಳಿಸಲಾಗಿದೆ.

ಕಳೆದ ವರ್ಷ ಜೋಧಪುರ್​ ವಾಯುನೆಲೆಯಲ್ಲಿ ಎರಡು ಮಿಗ್‌-27 ವಿಮಾನಗಳ ಪೈಕಿ ಒಂದನ್ನು ನಿಷ್ಕ್ರೀಯಗೊಳಿಸಲಾಗಿತ್ತು. ಸದ್ಯ ವಿಶ್ವದ ಯಾವುದೇ ಪ್ರದೇಶದಲ್ಲಿ ಈ ವಿಮಾನ ಬಳಕೆ ಮಾಡುತ್ತಿಲ್ಲ. ಜತೆಗೆ ಬೇರೆ ಯಾವುದೇ ದೇಶ ಕೂಡ ಇದನ್ನು ಬಳಸುತ್ತಿಲ್ಲ. ಮಿಗ್-21, ಮಿಗ್-23 ಎಂಎಫ್, ಮಿಗ್-23ಬಿನ್, ಮಿಗ್-25, ಮಿಗ್-27 ಮಿಗ್ ಸರಣಿ ವಿಮಾನಗಳಾಗಿವೆ.

ಭಾರತೀಯ ವಾಯುಸೇನೆಯಲ್ಲಿ ಬರೋಬ್ಬರಿ 35 ವರ್ಷಗಳ ಕಾಲ ನಿರಂತರವಾಗಿ ಸೇವೆ ಸಲ್ಲಿಸಿರುವ ಮಿಗ್ -27 ಯುದ್ಧ ವಿಮಾನಗಳು 87 ನೇ ವಾಯುಪಡೆಯ ದಿನದಂದು ಸೇವೆಯಿಂದ ನಿವೃತ್ತಿ ಪಡೆದಿವೆ.

ABOUT THE AUTHOR

...view details