ನವದೆಹಲಿ: ಭಾರತೀಯ ವಾಯುಪಡೆಯ ಮಹಿಳಾ ವಿಂಗ್ ಕಮಾಂಡರ್ ಆಗಿರುವ ಅಂಜಲಿ ಸಿಂಗ್ ಅವರನ್ನು ರಷ್ಯಾದ ಮಾಸ್ಕೋದಲ್ಲಿರುವ ಭಾರತೀಯ ದೂತಾವಾಸ ಕಚೇರಿಯಲ್ಲಿ ಡೆಪ್ಯೂಟಿ ಏರ್ ಅಟ್ಯಾಚ್ ಸೇವೆಗೆ ನಿಯೋಜನೆಗೊಳಿಸಲಾಗಿದೆ.ಈ ಮೂಲಕ ಅವರು ಭಾರತದಿಂದ ವಿದೇಶದಲ್ಲಿರುವ ಮೊದಲ ಮಿಟಿಟರಿ ಡಿಪ್ಲೊಮ್ಯಾಟ್ ಎಂಬ ಹಿರಿಮೆಗೆ ಪಾತ್ರರಾದ್ರು.
ರಷ್ಯಾದಲ್ಲೂ ಭಾರತೀಯ ನಾರಿಶಕ್ತಿ ಅನಾವರಣ: ಇತಿಹಾಸ ಸೃಷ್ಟಿಸಿದ ಅಂಜಲಿ
ಭಾರತೀಯ ದೂತಾವಾಸ ಕಚೇರಿಯಲ್ಲಿ ಡೆಪ್ಯೂಟಿ ಏರ್ ಅಟ್ಯಾಚ್ ಹುದ್ದೆಗೆ ಮೂರು ದಳಗಳಲ್ಲಿರುವ ಪುರುಷ ಅಧಿಕಾರಿಗಳನ್ನು ಮಾತ್ರವೇ ನೇಮಿಸಲಾಗುತ್ತಿತ್ತು. ಈ ಸಂಪ್ರದಾಯವನ್ನು ವಾಯುಪಡೆ ಮೊದಲ ಬಾರಿಗೆ ಮುರಿದು ಮಹಿಳೆಗೆ ಸ್ಥಾನ ನೀಡಿದೆ. ಏರೋನಾಟಿಕಲ್ ಎಂಜಿನಿಯರ್ ಅಧಿಕಾರಿಯಾಗಿರುವ ಅಂಜಲಿ ಸಿಂಗ್ ಅವರು ಕಳೆದ 17 ವರ್ಷಗಳ ಸೇವಾ ಅನುಭವ ಹೊಂದಿದ್ದಾರೆ. ಮಿಗ್- 29 ಯುದ್ಧ ವಿಮಾನ ಹಾರಾಟದ ತರಬೇತಿ ಸಹ ಪಡೆದಿದ್ದಾರೆ.
ಸಾಂದರ್ಭಿಕ ಚಿತ್ರ
ಅಂಜಲಿ ಸಿಂಗ್ ಅವರು ವಿದೇಶಗಳಲ್ಲಿರುವ ಭಾರತೀಯ ರಾಯಭಾರಿ ಕಚೇರಿಗಳಲ್ಲಿ ರಕ್ಷಣಾ ವ್ಯವಹಾರಗಳನ್ನು ನೊಡಿಕೊಳ್ಳುವ ಹುದ್ದೆಗೆ ನಿಯೋಜನೆಗೊಂಡ ಪ್ರಥಮ ಮಹಿಳೆ ಎನ್ನಿಸಿಕೊಂಡರು.
ಇದುವರೆಗೂ ಈ ಹುದ್ದೆಗೆ ಮೂರು ದಳಗಳಲ್ಲಿರುವ ಪುರುಷ ಅಧಿಕಾರಿಗಳನ್ನಷ್ಟೇ ನೇಮಿಸಲಾಗುತ್ತಿತ್ತು. ಈ ಸಂಪ್ರದಾಯವನ್ನು ವಾಯುಪಡೆ ಮೊದಲ ಬಾರಿಗೆ ಮುರಿದು ಮಹಿಳೆಗೆ ಸ್ಥಾನ ಕಲ್ಪಿಸಿದೆ. ಏರೋನಾಟಿಕಲ್ ಎಂಜಿನಿಯರ್ ಅಧಿಕಾರಿಯಾಗಿರುವ ಅಂಜಲಿ ಸಿಂಗ್ ಅವರು ಕಳೆದ 17 ವರ್ಷಗಳ ಸೇವಾ ಅನುಭವ ಹೊಂದಿದ್ದಾರೆ. ಮಿಗ್- 29 ಯುದ್ಧ ವಿಮಾನ ಹಾರಾಟದ ತರಬೇತಿ ಸಹ ಪಡೆದಿದ್ದಾರೆ.