ನವದೆಹಲಿ: ಭಾರತೀಯ ವಾಯುಪಡೆ ತನ್ನ ಎಫ್16 ಯುದ್ಧವಿಮಾನವನ್ನು ಹೊಡೆದುರುಳಿಸಿಲ್ಲ ಎಂದು ಸುಳ್ಳು ಹೇಳುತ್ತಲೇ ಇರುವ ಪಾಕಿಸ್ತಾನಕ್ಕೆ ಭಾರತ ಸಾಕ್ಷಿ ತೋರಿಸಿ, ಮುಟ್ಟಿ ನೋಡಿಕೊಳ್ಳುವಂತೆ ಮಾಡಿದೆ.
ಫೆಬ್ರವರಿ 27ರಂದು ಭಾರತದ ಮಿಗ್ 21, ಪಾಕಿಸ್ತಾನದ ಎಫ್ 16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದು ಸತ್ಯ ಎಂದು ರಡಾರ್ ಚಿತ್ರಗಳನ್ನು ಪಾಕ್ ಮುಂದಿಟ್ಟಿದೆ. ಏರ್ಬೊರ್ನ್ ವಾರ್ನಿಂಗ್ ಅಂಡ್ ಕಂಟ್ರೋಲಿಂಗ್ ಸಿಸ್ಟಂ (AWACS) ಸೆರೆಹಿಡಿದ ಗ್ರಾಫಿಕ್ ಚಿತ್ರಗಳನ್ನು ಭಾರತದ ವಾಯುಪಡೆ ಮಾಧ್ಯಮಗಳಿಗೆ ಪ್ರದರ್ಶಿಸಿದೆ.
ಪಾಕಿಸ್ತಾನದ ಎಫ್ 16 ಅನ್ನು ಹೊಡೆದುರುಳಿಸಿದ್ದು ಸತ್ಯ ಏರ್ ವೈಸ್ ವಾರ್ಷಲ್ ಆರ್ ಜಿ ಕಪೂರ್, ಈ ಸಾಕ್ಷಿಯು ಪಾಕಿಸ್ತಾನ್ ಎಫ್ 16 ಅನ್ನು ಬಳಸಿತ್ತು ಎಂಬುದರ ಜತೆಗೆ, ನಮ್ಮ ಮಿಗ್ 21, ಅದನ್ನು ಹೊಡೆದುಹಾಕಿತ್ತು ಎಂಬುದನ್ನೂ ಸಾಬೀತುಪಡಿಸುತ್ತವೆ ಎಂದು ವಿವರಣೆ ನೀಡಿದರು.
ಫೆಬ್ರವರಿ 27ರಂದು ಈ ಎರಡೂ ವಿಮಾನಗಳು ವೈಮಾನಿಕ ಯುದ್ಧ ನಡೆಸಿದ್ದರಲ್ಲಿ ಅನುಮಾನವೇ ಇಲ್ಲ. ಎಲೆಕ್ಟ್ರಾನಿಕ್ ಸಿಗ್ನೇಚರ್ ಹಾಗೂ ರೇಡಿಯೋ ಟ್ರಾನ್ಸ್ಕ್ರಿಪ್ಟ್ಗಳು ಇದನ್ನೇ ಹೇಳುತ್ತಿವೆ ಎಂದರು.
ಅಂದು ಪಾಕ್ ತಮ್ಮ ಎಫ್ 16 ಯುದ್ಧ ವಿಮಾನವನ್ನು ಕಳೆದುಕೊಂಡಿತು ಎಂದು ಭಾರತದ ವಾಯುಪಡೆ ಮತ್ತೆ ವಿಶ್ವಾಸಾರ್ಹ ಸಾಕ್ಷಿಯಿಂದ ಹೇಳುತ್ತಿದೆ ಎಂದರು.
ಭಾರತದ ಯುದ್ಧ ವಿಮಾನ ನಮ್ಮ ಎಫ್16ಗೆ ಯಾವುದೇ ಅನಾಹುತ ಮಾಡಿಲ್ಲ. ಅದರ ಮಿಸೈಲ್ಗಳು ನಮ್ಮ ಯುದ್ಧ ವಿಮಾನಕ್ಕೆ ತಾಗದೆ ಸಿಡಿದು ಬಿದ್ದಿವೆ ಎಂದು ಇತ್ತೀಷೆಗಷ್ಟೆ ಪಾಕ್ ಒಂದಷ್ಟು ಪೋಟೋಗಳನ್ನು ಟ್ವಿಟ್ಟರ್ನಲ್ಲಿ ಹಾಕಿಕೊಂಡಿತ್ತು. ಅಲ್ಲದೆ, ಪಾಕ್ಗೆ ಅಮೆರಿಕ ನೀಡಿದ ಎಫ್16 ಯುದ್ಧ ವಿಮಾನಗಳಲ್ಲಿ ಯಾವುದೂ ನಾಪತ್ತೆಯಾಗಿಲ್ಲ ಎಂದು ಅಮೆರಿಕದ ಮ್ಯಾಗಜೀನ್ವೊಂದು ವರದಿ ನೀಡಿತ್ತು. ಆದರೆ ಈ ಎಲ್ಲ ವಾದಗಳನ್ನೂ ತಳ್ಳಿಹಾಕುತ್ತಲೇ ಬಂದಿದ್ದ ಭಾರತ, ಇದೀಗ ಪಾಕ್ ಹಾಗೂ ವಿಶ್ವದ ಎದುರುಸಾಕ್ಷಿಯನ್ನಪ್ರದರ್ಶಿಸಿದೆ.