ಲೂದಿಯಾನ:ಭಾರತೀಯ ವಾಯುಸೇನೆಯ ಅಪಾಚೆ ಯುದ್ಧ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿರುವ ಘಟನೆ ಪಂಜಾಬ್ನ ಹೊಶಿಯಾರ್‌ಪುರ್‌ನಲ್ಲಿ ನಡೆದಿದೆ. ನಿಯಂತ್ರಣ ಕೊಠಡಿಯಿಂದ ಎಚ್ಚರಿಕೆ ಬಂದ ಕೂಡಲೇ ಕೃಷಿ ಜಮೀನಿನಲ್ಲಿ ಹೆಲಿಕಾಪ್ಟರ್ಅನ್ನು ಲ್ಯಾಂಡಿಂಗ್ ಮಾಡಲಾಗಿದೆ. ಪೈಲಟ್ ಸುರಕ್ಷಿತವಾಗಿದ್ದಾರೆ ಎಂದು ವಾಯುಸೇನೆಯ ಮೂಲಗಳು ತಿಳಿಸಿವೆ.
ಭಾರತೀಯ ವಾಯುಸೇನೆಯ ಯುದ್ಧ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ - ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ
ನಿಯಂತ್ರಣ ಕೊಠಡಿಯಿಂದ ಎಚ್ಚರಿಕೆ ಬರುತ್ತಿದ್ದಂತೆಯೇ ಭಾರತೀಯ ವಾಯು ಸೇನೆಯ ಅಪಾಚೆ ಯುದ್ಧ ಹೆಲಿಕಾಪ್ಟರ್ ಪಂಜಾಬ್ನ ಹೊಶಿಯಾರ್‌ಪುರದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
ತುರ್ತು ಭೂಸ್ಪರ್ಶ ಮಾಡಿದ ಹೆಲಿಕಾಪ್ಟರ್ ಪಠಾಣ್‌ಕೋಟ್ ಏರ್ ಬೇಸ್‌ನಿಂದ ಹಾರಾಟ ಆರಂಭಿಸಿತ್ತು. ಸ್ಥಳಕ್ಕಾಗಿಮಿಸಿದ ವಾಯುಸೇನಾ ಸಿಬ್ಬಂದಿ ಪರಿಶೀಲನೆ ನಡೆಸಿದ ಬಳಿಕ ಹೆಲಿಕಾಪ್ಟರ್ ವಾಪಸ್ ತರಲಾಗಿದೆ.
ನಿನ್ನೆಯಷ್ಟೇ ದೆಹಲಿಯಿಂದ ಚಂಡೀಘಡಕ್ಕೆ ತೆರಳುತ್ತಿದ್ದ ವಾಯುಸೇನೆಯ ಚೇತಕ್ ಹೆಲಿಕಾಪ್ಟರ್ ತಾಂತ್ರಿಕ ದೋಷದಿಂದ ಉತ್ತರ ಪ್ರದೇಶದ ಭಾಗ್‌ಪೇಟ್‌ನ ಎಕ್ಸ್‌ಪ್ರೆಸ್ ಹೈವೇನಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು. ಲೇಹ್ನಿಂದ ಬಂದಿದ್ದ ವೈದ್ಯಕೀಯ ಕೋವಿಡ್-19 ಸ್ಯಾಂಪಲ್ಗಳನ್ನು ದೆಹಲಿಯ ಹಿಂಡನ್ ವಾಯುನೆಲೆಯಿಂದ ಚಂಡೀಘಡಕ್ಕೆ ಸಾಗಿಸುತ್ತಿದ್ದಾಗ ಈ ಅವಘಡ ಸಂಭವಿಸಿತ್ತು.