ಕರ್ನಾಟಕ

karnataka

ETV Bharat / bharat

ತೇಜಸ್​ನಲ್ಲಿ ವಾಯುಪಡೆಯ ಮುಖ್ಯಸ್ಥರ ಹಾರಾಟ... ಕಾರ್ಯರೂಪಕ್ಕೆ ಬಂತು ಸ್ಕ್ವಾಡ್ರನ್ 'ಫ್ಲೈಯಿಂಗ್ ಬುಲೆಟ್ಸ್' - ಆರ್‌.ಕೆ.ಎಸ್.ಭದೌರಿಯಾ

ಏರ್ ಚೀಫ್ ಮಾರ್ಷಲ್ ಆರ್‌.ಕೆ.ಎಸ್. ಭದೌರಿಯಾ ಅವರು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಲಘು ಯುದ್ಧ ವಿಮಾನ ತೇಜಸ್ ಒಳಗೊಂಡ ಎರಡನೇ ಸ್ಕ್ವಾಡ್ರನ್ ಅನ್ನು ವಾಯುಸೇನೆಗೆ ಸೇರ್ಪಡೆಗೊಳಿಸಿದ್ದಾರೆ.

IAF Chief flies LCA Tejas
ತೇಜಸ್​ನಲ್ಲಿ ವಾಯುಪಡೆಯ ಮುಖ್ಯಸ್ಥರ ಹಾರಾಟ

By

Published : May 27, 2020, 12:34 PM IST

ಸುಲೂರು(ತಮಿಳುನಾಡು): ಭಾರತೀಯ ವಾಯುಪಡೆಯ ಮುಖ್ಯಸ್ಥ, ಏರ್ ಚೀಫ್ ಮಾರ್ಷಲ್ ಆರ್‌.ಕೆ.ಎಸ್.ಭದೌರಿಯಾ ಅವರು ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಲಘು ಯುದ್ಧ ವಿಮಾನ ತೇಜಸ್ ಒಳಗೊಂಡ ಎರಡನೇ ಸ್ಕ್ವಾಡ್ರನ್ ಅನ್ನು ಸುಲೂರ್ ವಾಯುನೆಲೆಯಲ್ಲಿ ಕಾರ್ಯರೂಪಕ್ಕೆ ತಂದು ಸೇನೆಗೆ ಸೇರ್ಪಡೆಗೊಳಿಸಿದ್ದಾರೆ.

ತೇಜಸ್​ನಲ್ಲಿ ವಾಯುಪಡೆಯ ಮುಖ್ಯಸ್ಥರ ಹಾರಾಟ

ಭದೌರಿಯಾ 18 ಸ್ಕ್ವಾಡ್ರನ್ ಅನ್ನು 'ಫ್ಲೈಯಿಂಗ್ ಬುಲೆಟ್ಸ್' ಎಂಬ ಸಂಕೇತ ನಾಮದಿಂದ ಸೇನೆಗೆ ಸೇರ್ಪಡೆಗೊಳಿಸಿದ್ದಾರೆ. ಒಂದೇ ಆಸನದ ಲಘು ಯುದ್ಧ ವಿಮಾನ ತೇಜಸ್ ಫೈಟರ್ ಅನ್ನು ಆರ್‌.ಕೆ.ಎಸ್. ಭದೌರಿಯಾ ಹಾರಿಸಿದ್ದಾರೆ.

18 ಸ್ಕ್ವಾಡ್ರನ್ ಅನ್ನು 1965 ರಲ್ಲಿ 'ತೀವ್ರಾ ನಿರ್ಭಯಾ' ಎಂಬ ಧ್ಯೇಯವಾಕ್ಯದೊಂದಿಗೆ 'ತ್ವರಿತವಾದ ಮತ್ತು ಭಯವಿಲ್ಲದೆ' ಎಂಬ ಅರ್ಥದೊಂದಿಗೆ ರಚಿಸಲಾಯಿತು. ಸ್ಕ್ವಾಡ್ರನ್ ಅನ್ನು ಏಪ್ರಿಲ್ 15, 2016 ರಲ್ಲಿ ರದ್ದುಗೊಳಿಸುವ ಮೊದಲು ಮಿಗ್ 27 ವಿಮಾನವನ್ನು ಹಾರಾಟ ನಡೆಸುತ್ತಿತ್ತು.

ABOUT THE AUTHOR

...view details