ಹೊಸದಿಲ್ಲಿ: ದೆಹಲಿಯಿಂದ ಚಂಡೀಗಢಗೆ ತೆರಳುತ್ತಿದ್ದ ಭಾರತೀಯ ವಾಯುಸೇನೆಯ ಚೇತಕ್ ಹೆಲಿಕಾಪ್ಟರ್ ತಾಂತ್ರಿಕ ದೋಷದ ಕಾರಣದಿಂದ ತುರ್ತು ಭೂಸ್ಪರ್ಶ ಮಾಡಿದ ಘಟನೆ ಇಂದು ಬೆಳಗ್ಗೆ ನಡೆದಿದೆ. ಲೇಹ್ನಿಂದ ಬಂದಿದ್ದ ವೈದ್ಯಕೀಯ ಸ್ಯಾಂಪಲ್ಗಳನ್ನು ದೆಹಲಿಯ ಹಿಂಡನ್ ವಾಯುನೆಲೆಯಿಂದ ಚಂಡೀಗಢ್ಗೆ ಹೆಲಿಕಾಪ್ಟರ್ ಒಯ್ಯುತ್ತಿತ್ತು.
ದೆಹಲಿಯಲ್ಲಿ ಸೇನಾ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ - ವೈದ್ಯಕೀಯ ಸ್ಯಾಂಪಲ್
ಭಾರತೀಯ ವಾಯುಸೇನೆ ಹೆಲಿಕಾಪ್ಟರ್ ತಾಂತ್ರಿಕ ದೋಷದ ಕಾರಣದಿಂದ ತುರ್ತು ಭೂಸ್ಪರ್ಶ ಮಾಡಿದ ಘಟನೆ ಇಂದು ಬೆಳಗ್ಗೆ ದೆಹಲಿಯಲ್ಲಿ ನಡೆದಿದೆ. ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಎಚ್ಚೆತ್ತ ಪೈಲಟ್, ದೆಹಲಿಯ ಔಟರ್ ರಿಂಗ್ ರಸ್ತೆಯಲ್ಲಿ ಹೆಲಿಕಾಪ್ಟರ್ ಇಳಿಸುವ ಮೂಲಕ ಸಂಭವಿಸಬಹುದಾಗಿದ್ದ ಅನಾಹುತವನ್ನು ತಪ್ಪಿಸಿದ್ದಾರೆ.
ಹಿಂಡನ್ನಿಂದ 3 ನಾಟಿಕಲ್ ಮೈಲಿ ದೂರ ಸಾಗುತ್ತಿರುವಂತೆಯೇ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಎಚ್ಚೆತ್ತುಕೊಂಡ ಪೈಲಟ್, ದೆಹಲಿಯ ಔಟರ್ ರಿಂಗ್ ರಸ್ತೆಯಲ್ಲಿ ಹೆಲಿಕಾಪ್ಟರ್ ಇಳಿಸುವ ಮೂಲಕ ಸಂಭವಿಸಬಹುದಾಗಿದ್ದ ಅನಾಹುತ ತಡೆದಿದ್ದಾರೆ.
"ಪೈಲಟ್ಗಳು ಸೂಕ್ತ ಸಮಯದಲ್ಲಿ ಸರಿಯಾದ ನಿರ್ಧಾರ ಕೈಗೊಂಡಿದ್ದಾರೆ. ಯಾವುದೇ ರೀತಿಯ ಪ್ರಾಣ ಹಾನಿ ಅಥವಾ ಸರಕು ಹಾನಿ ಸಂಭವಿಸಿಲ್ಲ. ತಾಂತ್ರಿಕ ದೋಷ ಸರಿಪಡಿಸಿಕೊಂಡು ಹೆಲಿಕಾಪ್ಟರ್ ಸುರಕ್ಷಿತವಾಗಿ ಹಿಂಡನ್ ವಾಯುನೆಲೆಗೆ ಮರಳಿದೆ. ಬೇರೊಂದು ಕಾಯ್ದಿಟ್ಟ ಹೆಲಿಕಾಪ್ಟರ್ ಮೂಲಕ ವೈದ್ಯಕೀಯ ಸ್ಯಾಂಪಲ್ಗಳನ್ನು ಕಳುಹಿಸಲಾಗಿದೆ." ಎಂದು ವಾಯುಸೇನೆಯು ಪ್ರಕಟಣೆಯಲ್ಲಿ ತಿಳಿಸಿದೆ.