ಕರ್ನಾಟಕ

karnataka

ETV Bharat / bharat

ಕಿರ್ಗಿಸ್ತಾನದಿಂದ 50 ಡಿಆರ್​ಡಿಒ ವಿಜ್ಞಾನಿಗಳನ್ನು ಏರ್​ಲಿಫ್ಟ್ ಮಾಡಿದ ಭಾರತೀಯ ವಾಯುಪಡೆ - ಗ್ಲೋಬ್ ಮಾಸ್ಟರ್​ ವಿಮಾನಯಾನ ಸಂಸ್ಥೆ

ಕೊರೊನಾ ಸೋಂಕಿತ ವಿಜ್ಞಾನಿಗಳನ್ನು ಕಿರ್ಗಿಸ್ತಾನದಿಂದ ಭಾರತದ ವಾಯುಪಡೆ ಏರ್​ಲಿಫ್ಟ್ ಮಾಡಿದೆ. ಈ ವಿಜ್ಞಾನಿಗಳು ಡಿಆರ್​ಡಿಒಗೆ ಸೇರಿದವರಾಗಿದ್ದಾರೆ.

IAF airlifted scientists
ಡಿಆರ್​ಡಿಒ ವಿಜ್ಞಾನಿಗಳು ಏರ್​ಲಿಫ್ಟ್

By

Published : Nov 30, 2020, 7:09 PM IST

ನವದೆಹಲಿ:ಭಾರತೀಯ ವಾಯುಪಡೆಯು ಮಧ್ಯ ಏಷ್ಯಾದ ರಾಷ್ಟ್ರವಾದ ಕಿರ್ಗಿಸ್ತಾನದಿಂದ ಸುಮಾರು 50 ವಿಜ್ಞಾನಿಗಳನ್ನು ಏರ್​ಲಿಫ್ಟ್ ಮಾಡಿದೆ. ಇದಕ್ಕಾಗಿ ವಿಶೇಷ ಗ್ಲೋಬ್ ಮಾಸ್ಟರ್ ವಿಮಾನವನ್ನು ಬಳಸಿದೆ. ಈ ವಿಜ್ಞಾನಿಗಳು ಭಾರತ ಮತ್ತು ಕಿರ್ಗಿಸ್ತಾನದ ಜೊತೆ ನಡೆದ ಒಪ್ಪಂದದ ಕಾರಣದಿಂದ ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

ಭಾರತೀಯ ವಾಯುಪಡೆಯ ಸಿ-17 ಸ್ಕ್ಯಾಡ್ರನ್ ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿದ್ದು, ಕೊರೊನಾ ಸೋಂಕು ಇತರರಿಗೆ ಹರಡದಂತೆ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳಲಾಗಿತ್ತು.

ವಿಜ್ಞಾನಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ತಿಳಿದ ನಂತರ ಕ್ರಮ ಕೈಗೊಳ್ಳಲಾಗಿದ್ದು, ಸರ್ಕಾರಿ ಪ್ರಾಧಿಕಾರ ಭಾರತೀಯ ವಾಯುಪಡೆಯನ್ನು ಸಂಪರ್ಕಿಸಿ, ಸೋಂಕಿತರನ್ನು ಕರೆತರುವ ಪ್ರಕ್ರಿಯೆ ಆರಂಭಿಸಿತ್ತು ಎಂದು ಉನ್ನತ ಮೂಲಗಳು ಎಎನ್​ಐಗೆ ತಿಳಿಸಿವೆ.

ಡಿಆರ್‌ಡಿಒ ವಿಜ್ಞಾನಿಗಳು ಕಿರ್ಗಿಸ್ತಾನದಲ್ಲಿ ಪ್ರಯೋಗದಲ್ಲಿದ್ದು, ಅವರಿಗೆ ಕೊರೊನಾ ಸೋಂಕು ದೃಢಪಟ್ಟಾಗ ಅವರನ್ನು ಭಾರತಕ್ಕೆ ವಾಪಸ್ ಕರೆತರುವ ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ಈಟಿವಿ ಭಾರತಕ್ಕೆ ಉನ್ನತ ಮೂಲಗಳು ತಿಳಿಸಿವೆ.

ಸುಮಾರು 20 ಗಂಟೆಗಳ ಕಾರ್ಯಾಚರಣೆ ಇದಾಗಿದ್ದು, ದಕ್ಷಿಣ ಭಾರತದ ಹಲವೆಡೆ ವಿಜ್ಞಾನಿಗಳನ್ನು ತಲುಪಿಸಿದ ಬಳಿಕ ಕಾರ್ಯಾಚರಣೆ ಪೂರ್ಣಗೊಂಡಿದೆ. ಇದಕ್ಕೂ ಮೊದಲು ಐಎಎಫ್​ ಚೀನಾದ ವುಹಾನ್​ನಲ್ಲಿ ಸಿಲುಕಿದ್ದ ಭಾರತೀಯರು ಹಾಗೂ ವಿದ್ಯಾರ್ಥಿಗಳನ್ನು ಏರ್​ಲಿಫ್ಟ್ ಮಾಡಿತ್ತು.

ABOUT THE AUTHOR

...view details