ಗೊಡ್ಡಾ(ಜಾರ್ಖಂಡ್): ರೇಪ್ ಇನ್ ಇಂಡಿಯಾ ಹೇಳಿಕೆಗೆ ಕ್ಷಮೆಯಾಚನೆ ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ರೇಪ್ ಹೇಳಿಕೆಗೆ ಕ್ಷಮೆ ಯಾಚಿಸಲ್ಲ.. ಮೋದಿಯ ಈ ವಿಡಿಯೋ ಶೇರ್ ಮಾಡಿದ ರಾಹುಲ್! - ರಾಹುಲ್ ಗಾಂಧಿ ರೇಪ್ ಇಂಡಿಯಾ
ರೇಪ್ ಇನ್ ಇಂಡಿಯಾ ಹೇಳಿಕೆಗೆ ಸಂಬಂಧಿಸಿದಂತೆ ಕ್ಷಮೆಯಾಚನೆ ಅಸಾಧ್ಯ ಎಂದು ರಾಹುಲ್ಗಾಂಧಿ ಸ್ಪಷ್ಟಪಡಿಸಿದ್ದಾರೆ.
ಮೇಕ್ ಇನ್ ಇಂಡಿಯಾ ಅಲ್ಲ, ರೇಪ್ ಇನ್ ಇಂಡಿಯಾ... ಮೋದಿ ಸರ್ಕಾರದ ವಿರುದ್ಧ ರಾಗಾ ವಾಗ್ದಾಳಿ!
ತಮ್ಮ ಹೇಳಿಕೆ ಹೆಚ್ಚು ಟೀಕೆಗೆ ಒಳಗಾಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ ರಾಹುಲ್ ಗಾಂಧಿ, ಸದನದಲ್ಲಿ ಈಶಾನ್ಯ ರಾಜ್ಯಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಯ ವಿಷಯದ ಗಮನ ಬೇರೆ ಕಡೆ ಸೆಳೆಯುವ ಉದ್ದೇಶದಿಂದ ಬಿಜೆಪಿ ಈ ರೀತಿಯಾಗಿ ನಡೆದುಕೊಳ್ಳುತ್ತಿದೆ ಎಂದಿದ್ದಾರೆ. ರಾಹುಲ್ ಗಾಂಧಿ ರೇಪ್ ಇಂಡಿಯಾ ಹೇಳಿಕೆಗೆ ಲೋಕಸಭೆಯಲ್ಲಿ ಬಿಜೆಪಿ ಪಕ್ಷ ಆಕ್ರೋಶ ಹೊರಹಾಕಿದ್ದು, ಕಾಂಗ್ರೆಸ್ ಸಂಸದನ ಕ್ಷಮೆಯಾಚನೆಗೆ ಬಿಗಿಪಟ್ಟು ಹಿಡಿದಿವೆ.
ಪ್ರತಿದಿನ ಮೋದಿ ಮೇಕ್ ಇನ್ ಇಂಡಿಯಾ ಎಂದು ಹೇಳಿಕೆ ನೀಡುತ್ತಾರೆ. ಆದರೆ ಬಿಜೆಪಿ ಆಡಳಿತ ನಡೆಸುತ್ತಿರುವ ಪ್ರತಿ ರಾಜ್ಯದಲ್ಲಿ ಅತ್ಯಾಚಾರದಂತಹ ಹೇಯ ಕೃತ್ಯ ನಡೆಯುತ್ತಿದ್ದು, ಪ್ರತಿದಿನ ಅದೇ ಸುದ್ದಿ ಬಿತ್ತರಗೊಳ್ಳುತ್ತಿದೆ ಎಂದರು. ಈ ಹಿಂದೆ ನರೇಂದ್ರ ಮೋದಿ ಅವರು ದೆಹಲಿ ರೇಪ್ ಕ್ಯಾಪಿಟಲ್ ಎಂದು ಹೇಳಿಕೆ ನೀಡಿರುವ ದೃಶ್ಯ ನನ್ನ ಮೊಬೈಲ್ನಲ್ಲಿ ಇದೆ. ನಾನು ಅದನ್ನ ಟ್ವೀಟ್ ಮಾಡಿದ್ದೇನೆ. ಎಲ್ಲರೂ ನೋಡಿಕೊಳ್ಳಲಿ ಎಂದಿದ್ದಾರೆ.