ಕರ್ನಾಟಕ

karnataka

ETV Bharat / bharat

ನಿಜಾಂಶ ಬಿಚ್ಚಿಟ್ಟ 'ರಾವಲ್ಪಿಂಡಿ ಎಕ್ಸ್‌ಪ್ರೆಸ್': 'ಮಹಮ್ಮದ್​​ ಅಮೀರ್'​​ ಬಗ್ಗೆ ಶೋಯೆಬ್ ಅಖ್ತರ್ ಹೇಳಿದ್ದಿಷ್ಟು! - ಶೋಯೆಬ್ ಅಖ್ತರ್

ಮಹಮ್ಮದ್​​ ಅಮೀರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬೆನ್ನಲ್ಲೆ ಶೋಯೆಬ್​​ ಅಖ್ತರ್​​ ತಮ್ಮ ಯುಟೂಬ್​​ ಚಾನೆಲ್​ನಲ್ಲಿ ವಿಡಿಯೋ ಒಂದನ್ನು ಹರಿಬಿಟ್ಟಿದ್ದು, ನನಗೆ 2011ರ ವರ್ಲ್ಡ್​​​​ ಕಪ್​​ ಸಮಯದಲ್ಲಿ ಶಾಹಿದ್ ಅಫ್ರಿದಿ ಅಲ್ಲ ಪಿಸಿಬಿ ಆಡಳಿತ ಮಂಡಳಿ ನನ್ನ ಜೊತೆ ಸರಿಯಾಗಿ ನಡೆದುಕೊಳ್ಳಲಿಲ್ಲ. ಆಗ ನನಗೆ ಮಾನಸಿಕ ಹಿಂಸೆ ನೀಡಲಾಗುತ್ತಿತ್ತು. ಅದಕ್ಕೆ ನಾನು ಕಿವಿಗೊಡದೇ ನಿವೃತ್ತಿ ಘೋಷಿಸಿದೆ ಎಂದಿದ್ದಾರೆ.

i-wasnt-treated-well-by-pcb-management-during-2011-wc-says-akhtar
ಶೋಯೆಬ್ ಅಖ್ತರ್

By

Published : Dec 18, 2020, 10:22 PM IST

ನವದೆಹಲಿ :2011 ರ ವಿಶ್ವಕಪ್ ಸಮಯದಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ನನ್ನ ಜೊತೆ ಸರಿಯಾಗಿ ನಡೆದುಕೊಂಡಿರಲಿಲ್ಲ ಎಂದು ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಆರೋಪಿಸಿದ್ದಾರೆ.

ಗುರುವಾರ ಮಹಮ್ಮದ್​​ ಅಮೀರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಅಲ್ಲದೇ ಪಿಸಿಬಿ ನಿರ್ವಹಣೆ ಅಡಿ ತಮಗೆ ಮಾನಸಿಕ ಹಿಂಸೆಯಾಗಿದೆ, ಇದರಿಂದ ಆಡಲು ಸಾಧ್ಯವಿಲ್ಲ ಎಂದು ದೂರಿದ್ದರು.

ಸದ್ಯ, ಇದರ ಬೆನ್ನಲ್ಲೆ ಅಖ್ತರ್​​​ ತಮ್ಮ ಯುಟೂಬ್​​ ಚಾನೆಲ್​ನಲ್ಲಿ ವಿಡಿಯೋ ಒಂದನ್ನು ಹರಿಬಿಟ್ಟಿದ್ದು, ನನಗೆ 2011ರ ವರ್ಲ್ಡ್​​​ ಕಪ್​​ ಸಮಯದಲ್ಲಿ ಶಾಹಿದ್ ಅಫ್ರಿದಿ ಅಲ್ಲ ಪಿಸಿಬಿ ಆಡಳಿತ ಮಂಡಳಿ ನನ್ನ ಜೊತೆ ಸರಿಯಾಗಿ ನಡೆದುಕೊಳ್ಳಲಿಲ್ಲ. ಆಗ ನನಗೆ ಮಾನಸಿಕ ಹಿಂಸೆ ನೀಡಲಾಗುತ್ತಿತ್ತು. ಅದಕ್ಕೆ ನಾನು ಕಿವಿಗೊಡದೆ ನಿವೃತ್ತಿ ಘೋಷಿಸಿದೆ ಎಂದಿದ್ದಾರೆ.

ಅಮೀರ್ ಬೌಲಿಂಗ್ ಸುಧಾರಿಸಬೇಕಾಗಿತ್ತು, ಇಲ್ಲದಿದ್ದರೆ ಅವರನ್ನು ತಂಡದಿಂದ ಯಾರೂ ತೆಗೆದು ಹಾಕಲಾಗುತ್ತಿರಲಿಲ್ಲ. ಉತ್ತಮ ಆಟದ ಪ್ರದರ್ಶನ ನೀಡುವ ಮೂಲಕ ನಿಮ್ಮ ಭಯವನ್ನು ನೀವು ಎದುರಿಸಬೇಕಿತ್ತು ಎಂದು ಕ್ರಿಕೆಟಿಗ ಮಹಮ್ಮದ್​​ ಅಮೀರ್​ ನಿವೃತ್ತಿ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮತ್ತೊಂದು ಅವಕಾಶ ಬೇಡಿರುವ 'ರಾವಲ್ಪಿಂಡಿ ಎಕ್ಸ್‌ಪ್ರೆಸ್' ಕೇವಲ ಎರಡು ತಿಂಗಳು ಅವಕಾಶ ನೀಡಿದ್ರೆ ಅಮೀರ್‌ಗೆ ಬೌಲಿಂಗ್ ತರಬೇತಿ ನೀಡುತ್ತೇನೆ. ಅಮೀರ್​​ನನ್ನು ನನಗೆ ಒಪ್ಪಸಿದ್ರೆ ಕೇವಲ ಎರಡು ತಿಂಗಳಲ್ಲಿ ಎಲ್ಲರೂ ಅವರು ಗಂಟೆಗೆ 150ಕಿ.ಮಿ ವೇಗದಲ್ಲಿ ಬೌಲಿಂಗ್​ ಮಾಡುವುದನ್ನು ನೋಡುತ್ತಾರೆ. ಮೂರು ವರ್ಷದ ಹಿಂದೆ ಅವರಿಗೆ ನಾನು ತರಬೇತಿ ನೀಡಿದ್ದೆ. ಭರವಸೆ ಇದೆ ಅವರು ಮತ್ತೆ ಕ್ರಿಕೆಟ್​​ಗೆ ಮರಳುತ್ತಾರೆ ಎಂದೂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details