ಕರ್ನಾಟಕ

karnataka

ETV Bharat / bharat

'ಪೌರತ್ವ ಕಾಯ್ದೆ ಬಗ್ಗೆ ರಾಹುಲ್‌ ಗಾಂಧಿ 10 ಸಾಲು ಮಾತನಾಡಲಿ ನೋಡೋಣ' - ರಾಹುಲ್​ ಗಾಂಧಿ ಸಿಎಎ ಬಗ್ಗೆ 10 ಸಾಲು ಮಾತನಾಡಲಿ

ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ ಮಾತನಾಡುತ್ತಾ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪೌರತ್ವ (ತಿದ್ದುಪಡಿ) ಕಾಯ್ದೆಯ ನಿಬಂಧನೆಗಳ ಬಗ್ಗೆ 10 ಸಾಲು ಮಾತನಾಡಲಿ ಎಂದು ವ್ಯಂಗ್ಯವಾಡಿದ್ದಾರೆ.

ರಾಹುಲ್ ಗಾಂಧಿಗೆ ಜೆ.ಪಿ.ನಡ್ಡಾ ಸವಾಲು, JP Nadda Talks about Rahul Gandhi
ರಾಹುಲ್ ಗಾಂಧಿಗೆ ನಡ್ಡಾ ಸವಾಲು

By

Published : Dec 22, 2019, 7:06 PM IST

ಇಂದೋರ್(ಮಧ್ಯಪ್ರದೇಶ):ಪೌರತ್ವ ಕಾಯ್ದೆಯ ನಿಬಂಧನೆಗಳ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ 10 ಮಾತನಾಡಲಿ ನೋಡೋಣ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ ವ್ಯಂಗ್ಯವಾಡಿದ್ದಾರೆ.

ಸಿಂಧಿ ಸಮುದಾಯದ ಜನರನ್ನು ಭೇಟಿಯಾಗಿ ಪೌರತ್ವ ಕಾಯ್ದೆ ಕುರಿತು ಚರ್ಚಿಸಿದ ನಡ್ಡಾ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಆಕ್ರೋಶದ ಮಾತುಗಳನ್ನಾಡಿದ್ರು. ನೂತನ ತಿದ್ದುಪಡಿ ಕಾಯ್ದೆಯ ನಿಬಂಧನೆಗಳ ಬಗ್ಗೆ ರಾಹುಲ್ ಗಾಂಧಿ 10 ಸಾಲು ಮಾತನಾಡಲಿ ಮತ್ತು ಅದರಿಂದ ದೇಶದ ಜನರಿಗಾಗುವ ತೊಂದರೆಗಳ ಬಗ್ಗೆ 2 ಸಾಲು ಮಾತನಾಡಲಿ ನೋಡೋಣ ಎಂದಿದ್ದಾರೆ.

ಈ ದೇಶವನ್ನು ಮುನ್ನಡೆಸಲು ಮುಂದೆ ಬರುತ್ತಿರುವ ಜನರಿಗೆ ಈ ಬಗ್ಗೆ ಸಾಮಾನ್ಯ ಜ್ಞಾನ ಇಲ್ಲದಿರುವುದು ದುರಾದೃಷ್ಟಕರ ಸಂಗತಿ ಎಂದು ಜೆ.ಪಿ.ನಡ್ಡಾ ಬೇಸರ ವ್ಯಕ್ತಪಡಿಸಿದರು.

ಅಧಿಕಾರದಲ್ಲಿದ್ದಾಗ ಜವಾಹರಲಾಲ್ ನೆಹರೂ ಸಹ ಹೊರಗಿನವರಿಗೆ ಪೌರತ್ವದ ಹಕ್ಕನ್ನು ನೀಡುವ ಪರವಾಗಿದ್ದರು. 2003 ರಲ್ಲಿ ಮನಮೋಹನ್ ಸಿಂಗ್ ಪೌರತ್ವ ಕಾನೂನನ್ನು ರೂಪಿಸುವ ಭರವಸೆ ನೀಡಿದರು. ಆದರೆ ಆ ಭರವಸೆ ಪೂರೈಸಲು ಅವರಿಗೆ ಸಾಧ್ಯವಾಗಲಿಲ್ಲ ಎಂದು ಹೇಳಿದ್ರು.

ABOUT THE AUTHOR

...view details