ಪಶ್ಚಿಮ ಬಂಗಾಳ: ರಾಜ್ಯಪಾಲ ಜಗದೀಪ್ ಧಂಕರ್ ಅವರು ಮತ್ತೊಮ್ಮೆ ರಾಜ್ಯದ ಪೊಲೀಸ್ ಆಡಳಿತವನ್ನು ಟೀಕಿಸಿದ್ದಾರೆ.
ಪೊಲೀಸರನ್ನು ರಾಜಕೀಯ ಸಂಕೋಲೆಗಳಿಂದ ಮುಕ್ತಗೊಳಿಸಿ:ರಾಜ್ಯಪಾಲ ಜಗದೀಪ್ ಧಂಕರ್ - ರಾಜ್ಯಪಾಲ ಜಗದೀಪ್ ಧಂಕರ್ ಟ್ವೀಟ್
ಸಿಎಂ ಮಮತಾ ಬ್ಯಾನರ್ಜಿ ಅವರು ಪೊಲೀಸರನ್ನು ರಾಜಕೀಯ ಸಂಕೋಲೆಗಳಿಂದ ಮುಕ್ತಗೊಳಿಸುವಂತೆ ರಾಜ್ಯಪಾಲ ಜಗದೀಪ್ ಧಂಕರ್ ಒತ್ತಾಯಿಸಿದ್ದಾರೆ.
![ಪೊಲೀಸರನ್ನು ರಾಜಕೀಯ ಸಂಕೋಲೆಗಳಿಂದ ಮುಕ್ತಗೊಳಿಸಿ:ರಾಜ್ಯಪಾಲ ಜಗದೀಪ್ ಧಂಕರ್ Governor Jagdeep Dhankar](https://etvbharatimages.akamaized.net/etvbharat/prod-images/768-512-8525339-749-8525339-1598172992621.jpg)
ರಾಜ್ಯಪಾಲ ಜಗದೀಪ್ ಧಂಕರ್
ಈ ಬಗ್ಗೆ ಟ್ವೀಟ್ ಮಾಡಿದ ಅವರು, ಸಿಎಂ ಮಮತಾ ಬ್ಯಾನರ್ಜಿ ಅವರು ಪೊಲೀಸರನ್ನು ರಾಜಕೀಯ ಸಂಕೋಲೆಗಳಿಂದ ಮುಕ್ತಗೊಳಿಸುವಂತೆ ಒತ್ತಾಯಿಸಿದ್ದಾರೆ. ಪೊಲೀಸರನ್ನು ರಾಜಕೀಯವಾಗಿ ಬಳಸಿಕೊಳ್ಳುವುದು ಕಾನೂನಿನ ನಿಯಮ ಮತ್ತು ಪ್ರಜಾಪ್ರಭುತ್ವಕ್ಕೆ ವಿರೋಧವಾಗಿದೆ.
ರಾಜಕೀಯವಾಗಿ ಬದ್ಧವಾಗಿರುವ ಪೊಲೀಸರು ಪ್ರಜಾಪ್ರಭುತ್ವದಲ್ಲಿ ಸಾರ್ವಜನಿಕ ಸೇವಕರೇ ಹೊರತು ರಾಜಕೀಯ ಕಾರ್ಯಕರ್ತರಲ್ಲ ಎಂದು ಅವರು ತಿಳಿಸಿದ್ದಾರೆ.