ನವದೆಹಲಿ:ಕಾಂಗ್ರೆಸ್ ಪಕ್ಷದಲ್ಲಿನ ನಾಯಕತ್ವದ ಆಂತರಿಕ ಬಿಕ್ಕಟ್ಟು ಇದೀಗ ಭುಗಿಲೆದ್ದಿದ್ದು, ಇದೇ ವಿಷಯವಾಗಿ ಇಂದು ಮಹತ್ವದ ಕಾರ್ಯಕಾರಣಿ ಸಭೆ ನಡೆಸಲಾಯಿತು. ಇದರಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಅನೇಕ ಕಾಂಗ್ರೆಸ್ ಹಿರಿಯ ಮುಖಂಡರು ಭಾಗಿಯಾಗಿದ್ದರು.
ಮುಂದಿನ ಕೆಲ ತಿಂಗಳವರೆಗೆ ಸೋನಿಯಾ ಗಾಂಧಿ ಪಕ್ಷದ ಅಧ್ಯಕ್ಷೆಯಾಗಿ ಮುಂದುವರೆಯುವಂತೆ ಈ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಮುಂದಿನ ಆರು ತಿಂಗಳೊಳಗೆ ಪಕ್ಷಕ್ಕೆ ನೂತನ ಅಧ್ಯಕ್ಷರ ನೇಮಕ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ.
ಇದೇ ವಿಷಯವಾಗಿ ಇದೀಗ ಪಕ್ಷದ ಹಿರಿಯ ಮುಖಂಡ, ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಮಾತನಾಡಿದ್ದಾರೆ. ಪಕ್ಷದಲ್ಲಿ ಎಲ್ಲವೂ ಚೆನ್ನಾಗಿದೆ ಎಂದು ನಾನು ಹೇಳುವುದಿಲ್ಲ. ಸಮುದ್ರದ ಅಲೆಗಳು ಎಂದೆಂದಿಗೂ ಮೌನವಾಗಿರುವುದಿಲ್ಲ. ಯಾವಾಗಲೂ ಅಲೆಗಳು ಇರುತ್ತವೆ. ಅದೇ ರೀತಿ ಅಸಮಧಾನವಿರುತ್ತದೆ. ಇಂದಿನ ಸಭೆಯಲ್ಲಿ ಕೆಲವೊಂದು ಸಮಸ್ಯೆ ಬಗೆಹರಿಸಿದ್ದೇವೆ. ಮುಂದಿನ ದಿನಗಳಲ್ಲಿ ಪಕ್ಷ ಮತ್ತಷ್ಟು ಶಕ್ತಿಯುತ ಮತ್ತು ಸಕ್ರಿಯವಾಗಲಿದೆ ಎಂದು ನಾನು ಭಾವಿಸುತ್ತೇನೆ ಎಂದು ಚಿದಂಬರಂ ಹೇಳಿದ್ದಾರೆ.
ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದವರು ಖಂಡಿತವಾಗಿ ನನ್ನ ಹಾಗೂ ರಾಹುಲ್ ಗಾಂಧಿಯವರಂತೆ ಬಿಜೆಪಿ ವಿರೋಧಿಗಳು.ಅಸಮಾಧಾನವಿದೆ. ಇಂತಹ ಅಸಮಾಧಾನ ಬದಲಾವಣೆ ತರಲು ಮುನ್ನುಡಿ ಎಂದಿದ್ದಾರೆ. ಸೋನಿಯಾ ಗಾಂಧಿಗೆ ಪತ್ರ ಬರೆದವರು ಬಿಜೆಪಿ ಜತೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಹೇಳಿಕೆ ಯಾರು ನೀಡಿಲ್ಲ ಈಗಾಗಲೇ ಇದಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.