ಇಂದೋರ್: ಇಷ್ಟು ದಿನ ಬೌಲಿಂಗ್ನಲ್ಲಿ ಮಾತ್ರ ತಮ್ಮ ಶಕ್ತಿ ಪ್ರದರ್ಶನ ಮಾಡ್ತಿದ್ದ ಟೀಂ ಇಂಡಿಯಾ ವೇಗಿ ಉಮೇಶ್ ಯಾದವ್ ಇದೀಗ ಬ್ಯಾಟಿಂಗ್ನಲ್ಲೂ ದೊಡ್ಡ ಹೊಡೆತಗಳ ಮೂಲಕ ಎಲ್ಲರ ಮನಗೆದ್ದಿದ್ದು, ಈ ಹಿಂದೆ ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್ ಟೆಸ್ಟ್ನಲ್ಲಿ ಅಬ್ಬರಿಸಿದ ವೇಗಿ ಇದೀಗ ಬಾಂಗ್ಲಾ ವಿರುದ್ಧದ ಮೊದಲ ಟೆಸ್ಟ್ನಲ್ಲೂ ಮಿಂಚು ಹರಿಸಿದ್ದಾರೆ.
ನಿನ್ನೆ 7ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲು ಮೈದಾನಕ್ಕಿಳಿದ ಉಮೇಶ್ ಯಾದವ್ ತಾವು ಎದುರಿಸಿದ 10 ಎಸೆತಗಳಲ್ಲಿ 3 ಸಿಕ್ಸರ್ ಸೇರಿ 25ರನ್ಗಳಿಕೆ ಮಾಡಿ ಅಜೇಯರಾಗಿ ಉಳಿದರು. ಅದೇ ರೀತಿ, ಬೌಲಿಂಗ್ನಲ್ಲೂ ಮಿಂಚಿರುವ ಉಮೇಶ್ ಯಾದವ್ ಒಟ್ಟು 4ವಿಕೆಟ್ ಪಡೆದುಕೊಂಡಿದ್ದಾರೆ.