ನವದೆಹಲಿ: ಈ ಸರ್ಕಾರ, ದೇಶದ ಸುಧಾರಣೆಗಳ ಬಗ್ಗೆ ಮಾತನಾಡುತ್ತಿತ್ತು. ಅದೇ ನನ್ನನ್ನು ರಾಜಕೀಯಕ್ಕೆ ಬರಲು ಬರಲು ಪ್ರೇರೇಪಿಸಿತು ಎಂದು ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್ ಹೇಳಿದ್ದಾರೆ.
ರಾಜಧಾನಿ ದೆಹಲಿಯಲ್ಲಿ ನಡೆದ ವಿವಿಧ ತಮಿಳು ಸಂಘಗಳ ಜಂಟಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸರ್ಕಾರವು ಹಲವು ಮಹತ್ವದ ಸುಧಾರಣೆಗಳನ್ನು ನೋಡಿ ನಾನು ರಾಜಕೀಯಕ್ಕೆ ಕಾಲಿಟ್ಟೆ. ದೇಶದ ಸುಧಾರಣೆ ಎಂದರೆ, ಪೌಷ್ಟಿಕಾಂಶ, ಹೆಣ್ಣು ಮಕ್ಕಳ ಶಿಕ್ಷಣ, ಮಧ್ಯಮ ವರ್ಗದ ಜನರ ಸೇವೆ ಎನ್ನುವಂತಹ ಸರ್ಕಾರವನ್ನು ದೇಶದಲ್ಲಿ ಕಾಣುತ್ತಿದ್ದೇವೆ. ಹೀಗಾಗಿ ನನಗೂ ಈ ದೇಶಕ್ಕಾಗಿ ಸುಧಾರಣೆ ತರಲು ಏನಾದರು ಕೊಡುಗೆ ನೀಡಬೇಕು ಎಂದೆನಿಸಿತು. ಹೀಗಾಗಿ ರಾಜಕೀಯಕ್ಕೆ ಬಂದಿದ್ದೇನೆ ಎಂದು ಜೈಶಂಕರ್ ತಮ್ಮ ಮನದಾಳದ ಮಾತುಗಳನ್ನಾಡಿದರು.