ಭೂತಾನ್:ಲ್ಯಾಂಡರ್ ಸಂಪರ್ಕ ಕಡಿತಗೊಂಡರೂ ತನ್ನ ಪ್ರಥಮ ಪ್ರಯತ್ನದಲ್ಲೇ ಅಲ್ಪ ಯಶ ಕಂಡ ಇಸ್ರೋ ಪ್ರಯತ್ನಕ್ಕೆ ದೇಶ ಹಾಗೂ ವಿದೇಶಗಳ ಪ್ರಮುಖ ನಾಯಕರಿಂದ ಅಭಿನಂದನೆ ವ್ಯಕ್ತವಾಗುತ್ತಿದೆ.
ಇಸ್ರೋ ಮತ್ತೆ ಚಂದ್ರಯಾನ ಯಶಸ್ಸುಗೊಳಿಸೋದ್ರಲ್ಲಿ ಅನುಮಾನವಿಲ್ಲ: ಭೂತಾನ್ ಪಿಎಂ
"ನಾವು ಭಾರತದ ಬಗ್ಗೆ ಹೆಮ್ಮೆ ಪಡುತ್ತೇವೆ. ಇದು ವಿಜ್ಞಾನಿಗಳ ದಿನ. ಚಂದ್ರಯಾನ-2 ಕಡೇ ಕ್ಷಣದಲ್ಲಿ ಕೆಲವು ಸವಾಲನ್ನು ಕಂಡಿರಬಹುದು. ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಇಸ್ರೋ ವಿಜ್ಞಾನಿಗಳು ಮತ್ತೆ ಚಂದ್ರಯಾನವನ್ನು ಯಶಸ್ಸುಗೊಳಿಸುತ್ತಾರೆ ಅನ್ನುವುದರಲ್ಲಿ ನನಗೆ ಅನುಮಾನವೇ ಇಲ್ಲ"
ಭೂತಾನ್ ಪಿಎಂ
ಟ್ವಿಟ್ಟರ್ ಮೂಲಕ ಇಸ್ರೋ ಹಾಗೂ ಭಾರತದ ಬೆನ್ನು ತಟ್ಟಿರುವ ಭೂತಾನ್ ಪ್ರಧಾನಿ ಲೋಟೇ ಶೆರಿಂಗ್, ನಾವು ಭಾರತದ ಬಗ್ಗೆ ಹೆಮ್ಮೆ ಪಡುತ್ತೇವೆ. ಇದು ವಿಜ್ಞಾನಿಗಳ ದಿನ. ಚಂದ್ರಯಾನ-2 ಕಡೇ ಕ್ಷಣದಲ್ಲಿ ಕೆಲವಷ್ಟು ಸವಾಲನ್ನು ಕಂಡಿರಬಹುದು. ಆದರೆ ಇಸ್ರೋ ವಿಜ್ಞಾನಿಗಳ ಧೈರ್ಯ ಹಾಗೂ ಸತತ ಪ್ರಯತ್ನ ಮಾತ್ರ ಐತಿಹಾಸಿಕ ಎಂದು ಬಣ್ಣಿಸಿದ್ದಾರೆ.
ನನಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಗೊತ್ತಿದೆ. ಅವರು ಮತ್ತು ಇಸ್ರೋ ವಿಜ್ಞಾನಿಗಳು ಮತ್ತೆ ಚಂದ್ರಯಾನವನ್ನು ಯಶಸ್ಸುಗೊಳಿಸುತ್ತಾರೆ ಅನ್ನುವುದರಲ್ಲಿ ನನಗೆ ಅನುಮಾನವೇ ಇಲ್ಲ ಎಂದಿದ್ದಾರೆ.