ಕರ್ನಾಟಕ

karnataka

By

Published : Feb 9, 2021, 8:02 PM IST

ETV Bharat / bharat

ಹಿಂದುಸ್ಥಾನಿ ಮುಸ್ಲಿಂ ಆಗಿರುವುದಕ್ಕೆ ನನಗೆ ಹೆಮ್ಮೆ ಎನಿಸುತ್ತಿದೆ: ಗುಲಾಮ್ ನಬಿ ಆಜಾದ್​​

ಜಗತ್ತಿನಲ್ಲಿ ಯಾವುದೇ ಮುಸ್ಲಿಮರು ಹೆಮ್ಮೆ ಪಡುತ್ತಾರೆ ಎಂದರೆ ಅವರು ಹಿಂದೂಸ್ಥಾನಿ ಮುಸ್ಲಿಮರಾಗಿರುತ್ತಾರೆ. ವರ್ಷಗಳಿಂದ ನಾವು ಅಫ್ಘಾನಿಸ್ತಾನ್ ಇರಾಕ್​ನಂತಹ ಮುಸ್ಲಿಂ ದೇಶಗಳು ಹೇಗೆ ನಾಶವಾಗುತ್ತದೆ ಎಂಬುದನ್ನು ನಾವು ನೋಡಿದ್ದೇವೆ. ಅಲ್ಲಿ ಹಿಂದೂಗಳು ಅಥವಾ ಕ್ರಿಶ್ಚಿಯನ್ನರು ಇಲ್ಲ. ಅವರು ತಮ್ಮ ತಮ್ಮ ನಡುವೆಯೇ ಕಿತ್ತಾಡುತ್ತಾರೆ ಎಂದಿದ್ದಾರೆ.

ghulam-nabi-azad-
ಗುಲಾಮ್ ನಬಿ ಆಜಾದ್​​

ನವದೆಹಲಿ: ರಾಜ್ಯಸಭೆಯಲ್ಲಿ ಕಾಂಗ್ರೆಸ್ ನಾಯಕ ಗುಲಾಮ್ ನಬಿ ಆಜಾದ್ ಅವರ ಅವದಿ ಪೂರ್ಣವಾಗಿದ್ದು, ಹೀಗಾಗಿ ಪ್ರಧಾನಿ ಮೋದಿ ಸೇರಿ ಸರ್ವ ಸದಸ್ಯರು ವಿದಾಯ ಹೇಳಿದ್ದಾರೆ. ಈ ನಡುವೆ ಕೊನೆ ಭಾಷಣ ಮಾಡಿದ ಆಜಾದ್ ಹಿಂದುಸ್ಥಾನಿ ಮುಸ್ಲಿಂ ಆಗಿರುವುದಕ್ಕೆ ನನಗೆ ಹೆಮ್ಮೆ ಎನಿಸುತ್ತಿದೆ ಎಂದಿದ್ದಾರೆ.

ನಾನು ಕೆಲವೇ ಪದಗಳಲ್ಲಿ ಹೇಳ ಬಯಸುತ್ತೇನೆ. 10 ಗಂಟೆಯ ಭಾಷಣವನ್ನು ಕವಿ ಕೇವಲ 2 ಪದದಲ್ಲಿ ವಿವರಿಸುತ್ತಾರೆ. ನಾನು ಸಹ ಅದೇ ರೀತಿ ವಿವರಿಸುತ್ತೇನೆ ಎಂದರು. ಬಳಿಕ ಭಾರತ ವಿಭಜನೆ ಕುರಿತು ಮಾತನಾಡಿದ ಅವರು, ವಿಭಜನೆಯ ವೇಳೆ ಪಾಕಿಸ್ತಾನಕ್ಕೆ ತೆರಳದ ಅದೃಷ್ಟವಂತ ಜನರಲ್ಲಿ ನಾನು ಇದ್ದೇನೆ. ಪಾಕಿಸ್ತಾನದ ಸನ್ನಿವೇಶಗಳ ಬಗ್ಗೆ ಓದಿದಾಗ ನಾನು ಹಿಂದೂಸ್ಥಾನಿ ಮುಸ್ಲಿಂ ಆಗಿರುವುದಕ್ಕೆ ಹೆಮ್ಮೆಯಾಗುತ್ತದೆ ಎಂದಿದ್ದಾರೆ.

ರಾಜ್ಯಸಭೆಯಲ್ಲಿ ಗುಲಾಮ್ ನಬಿ ಆಜಾದ್ ಭಾಷಣ

ಜಗತ್ತಿನಲ್ಲಿ ಯಾವುದೇ ಮುಸ್ಲಿಮರು ಹೆಮ್ಮೆಪಡುತ್ತಾರೆ ಎಂದರೆ ಅವರು ಹಿಂದೂಸ್ಥಾನಿ ಮುಸ್ಲಿಮರಾಗಿರುತ್ತಾರೆ. ವರ್ಷಗಳಿಂದ ನಾವು ಅಫ್ಘಾನಿಸ್ತಾನ್​ ಇರಾಕ್​ನಂತಹ ಮುಸ್ಲಿಂ ದೇಶಗಳು ಹೇಗೆ ನಾಶವಾಗುತ್ತದೆ ಎಂಬುದನ್ನು ನಾವು ನೋಡಿದ್ದೇವೆ. ಅಲ್ಲಿ ಹಿಂದೂಗಳು ಅಥವಾ ಕ್ರಿಶ್ಚಿಯನ್ನರು ಇಲ್ಲ. ಅವರು ತಮ್ಮ ತಮ್ಮ ನಡುವೆಯೇ ಕಿತ್ತಾಡುತ್ತಾರೆ ಎಂದು ಆ ರಾಷ್ಟ್ರಗಳ ಪರಿಸ್ಥಿತಿಯನ್ನ ತಮ್ಮದೇ ಮಾತುಗಳಲ್ಲಿ ವಿವರಿಸಿದರು.

ಇದನ್ನೂ ಓದಿ:ಗುಲಾಂ ನಬಿ ಆಜಾದ್​ಗೆ ಕಣ್ಣೀರಿನ ವಿದಾಯ ಹೇಳಿದ ಪ್ರಧಾನಿ ಮೋದಿ!

ABOUT THE AUTHOR

...view details