ರಾಜೌರಿ(ಜಮ್ಮು-ಕಾಶ್ಮೀರ):ಎಲ್ಲರೂ ತಮ್ಮ ಕುಟುಂಬಸ್ಥರೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸಲು ಇಷ್ಟಪಡುತ್ತಾರೆ. ನನಗೂ ಇದೇ ಆಸೆ ಇತ್ತು. ಹೀಗಾಗಿ ನಾನು ಇಲ್ಲಿಗೆ ಬಂದು ನಿಮ್ಮೊಂದಿಗೆ ಬೆಳಕಿನ ಹಬ್ಬವನ್ನು ಆಚರಿಸುತ್ತಿದ್ದೇನೆ ಎಂದು ಮೋದಿ ಹೇಳಿದ್ದಾರೆ.
ದೀಪಾವಳಿ ಹಬ್ಬದ ಆಚರಣೆಗಾಗಿ ಕಣಿವೆ ನಾಡಿಗೆ ತೆರಳಿರುವ ನಮೋ, ಜಮ್ಮು-ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಭಾರತೀಯ ಸೇನಾ ಸಿಬ್ಬಂದಿಯೊಂದಿಗೆ ಬೆರೆತು ದೀಪಾವಳಿಯನ್ನು ಸಂಭ್ರಮಿಸಿದ್ದಾರೆ. ದೇಶ ಕಾಯೋ ಯೋಧರೇ ತನ್ನ ಕುಟುಂಬ, ನೀವೇ ನನ್ನ ಕುಟುಂಬದ ಸದಸ್ಯರು ಎಂಬ ನರೇಂದ್ರ ಮೋದಿಯವರ ಭಾವನೆಯಿಂದ ದೇಶದ ಸೈನಿಕರು ಸಂತುಷ್ಟಗೊಂಡಿದ್ದಾರೆ.
ಸೇನಾ ಸಿಬ್ಬಂದಿ ಕುರಿತು ಮಾತನಾಡಿರುವ ಮೋದಿ, ದೇಶದಲ್ಲಿ ಅನೇಕ ಗಡಿ ಪ್ರದೇಶಗಳಿವೆ. ಆದರೆ ನೀವು ಇರುವ ಈ ಪ್ರದೇಶವು ವಿಶಿಷ್ಟವಾದುದು. ಅದು ಯುದ್ಧವಾಗಿರಲಿ, ದಂಗೆ ಇರಲಿ ಅಥವಾ ಒಳನುಸುಳುವಿಕೆಯೇ ಆಗಿರಲಿ. ಇಲ್ಲಿ ಎಲ್ಲವನ್ನು ಅನುಭವಿಸಬೇಕಾಗಿದೆ. ಪ್ರತಿ ಬಾರಿಯೂ ಇಲ್ಲಿ ಎಲ್ಲಾ ಸವಾಲನ್ನು ಜಯಿಸಿ ಹೊರಬಂದಿದ್ದೀರಿ. ಇದು ಸೋಲನ್ನೇ ಕಾಣದ ಇದು ಅಜೇಯ ಪ್ರದೇಶ ಎಂದು ಮೋದಿ ಹೊಗಳಿದ್ದಾರೆ. ಪ್ರಧಾನಿಯ ಶ್ಲಾಘನೆಗೆ ವೀರ ಯೋಧರೆ ಚಪ್ಪಾಳೆ ತಟ್ಟುವ ಮೂಲಕ ಸಂತಸ ಹೊರಕಿದ್ದಾರೆ.
ಈಗ ಸಮಯ ಬದಲಾಗಿದೆ. ನಮ್ಮ ಸಶಸ್ತ್ರ ಪಡೆಗಳು ಆಧುನಿಕವಾಗಿರಬೇಕು. ನಮ್ಮ ಶಸ್ತ್ರಾಸ್ತ್ರಗಳು ಆಧುನಿಕವಾಗಿರಬೇಕು. ನಮ್ಮ ತರಬೇತಿಯು ಜಾಗತಿಕ ಮಾನದಂಡಕ್ಕೆ ಸಮನಾಗಿರಬೇಕು. ನಮ್ಮ ಯೋಧರ ಮುಖದ ಮೇಲೆ ಯಾವುದೇ ಒತ್ತಡದ ಚರ್ಯೆ ಕಾಣಿಸಬಾರದು ಎಂದು ಮೋದಿ ಹೇಳಿದ್ದಾರೆ.
ಇದಕ್ಕೂ ಮುಂಚೆ ವೀರ ಯೋಧರಿಗೆ ಮೋದಿ ಸಿಹಿ ಹಂಚಿ ಶುಭಾಶಯ ವಿನಿಮಯ ಮಾಡಿದರು.