ನವದೆಹಲಿ: ಗುರು ಗೋವಿಂದ್ ಸಿಂಗ್ ಅವರ 354ನೇ ಜನ್ಮ ದಿನಾಚರಣೆಯ ಹಿನ್ನೆಲೆಯಲ್ಲಿ ಪ್ರಕಾಶ್ ಉತ್ಸವ ಅಥವಾ ಪ್ರಕಾಶ್ ಪರ್ವ ಹಬ್ಬ ನಡೆಸಲಾಗುತ್ತದೆ. ಈ ವೇಳೆ, ಗುರುದ್ವಾರ ಬಾಂಗ್ಲಾ ಸಾಹಿಬ್ನಲ್ಲಿ ಭಕ್ತರು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಸಿಖ್ಖರ ಹಬ್ಬ 'ಪ್ರಕಾಶ್ ಪರ್ವ'ಕ್ಕೆ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ - ಪ್ರಧಾನಿ ನರೇಂದ್ರ ಮೋದಿ ಸುದ್ದಿ
ಗುರು ಗೋವಿಂದ್ ಸಿಂಗ್ ಅವರ 354ನೇ ಜನ್ಮ ದಿನಾಚರಣೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಶುಭಾಶಯ ತಿಳಿಸಿದ್ದಾರೆ.
ಆಧ್ಯಾತ್ಮಿಕ ಗುರು, ಯೋಧ, ಕವಿ ಮತ್ತು ದಾರ್ಶನಿಕರಾದ 10ನೇ ಸಿಖ್ ಗುರುಗಳಾದ ಗುರು ಗೋಬಿಂದ್ ಸಿಂಗ್ ಅವರ 'ಪ್ರಕಾಶ್ ಪರ್ವ' ಸಿಖ್ಖರ ಪ್ರಮುಖ ಆಚರಣೆ.
ಇನ್ನು ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಶುಭಾಶಯ ತಿಳಿಸಿದ್ದಾರೆ. " ಶ್ರೀಗುರು ಗೋಬಿಂದ್ ಸಿಂಗ್ ಜಿ ಅವರ ಪ್ರಕಾಶ್ ಪುರಬ್ (ಪ್ರಕಾಶ್ ಪರ್ವ)ನ ಧಾರ್ಮಿಕ ಸಂದರ್ಭದಲ್ಲಿ ನಾನು ನಮಸ್ಕರಿಸುತ್ತೇನೆ. ಅವರದು ನ್ಯಾಯಯುತ ಮತ್ತು ಅಂತರ್ಗತ ಸಮಾಜವನ್ನು ರಚಿಸಲು ಮೀಸಲಾದ ಜೀವನ. ತನ್ನ ತತ್ವಗಳನ್ನು ಎತ್ತಿಹಿಡಿಯುವಾಗ ಅವರು ಅಚಲವಾಗಿದ್ದರು. ಅವರ ಧೈರ್ಯ ಮತ್ತು ತ್ಯಾಗವನ್ನೂ ನಾವು ನೆನಪಿಸಿಕೊಳ್ಳುತ್ತೇವೆ" ಎಂದು ಹೇಳಿದ್ದಾರೆ.