ಮಧ್ಯಪ್ರದೇಶ: ಭಾರತ ಮತ್ತು ಚೀನಾ ನಡುವಿನ ಗಡಿ ಘರ್ಷಣೆಯ ಹಿನ್ನೆಲೆಯಲ್ಲಿ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಜನತೆಗೆ ಮನವಿ ಮಾಡಿದ್ದಾರೆ.
'ಗಡಿಯಲ್ಲಿ ಸೇನೆ ದಿಟ್ಟ ಉತ್ತರ ನೀಡುತ್ತೆ; ನಾವು ಆರ್ಥಿಕವಾಗಿ ಚೀನಾಗೆ ಪೆಟ್ಟು ಕೊಡೋಣ' - Chief Minister Shivraj Singh Chouhan
ದೇಶಾದ್ಯಂತ ನಡೆಯುತ್ತಿರುವ ಚೀನಾ ಉತ್ಪಾದಿತ ವಸ್ತುಗಳ ಬಳಕೆ ನಿಷೇಧ ಅಭಿಯಾನಕ್ಕೆ ಹಲವಾರು ಸಂಘಸಂಸ್ಥೆಗಳು ಬೆಂಬಲ ಸೂಚಿಸುತ್ತಿವೆ. ಇದಕ್ಕೆ ಪೂರಕವಾಗಿರುವಂತೆ ಇದೀಗ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಕೂಡಾ ಚೀನಾ ವಸ್ತುಗಳನ್ನು ಬಳಸದಂತೆ ರಾಜ್ಯದ ಜನರಲ್ಲಿ ಮನವಿ ಮಾಡಿದ್ದಾರೆ.
!['ಗಡಿಯಲ್ಲಿ ಸೇನೆ ದಿಟ್ಟ ಉತ್ತರ ನೀಡುತ್ತೆ; ನಾವು ಆರ್ಥಿಕವಾಗಿ ಚೀನಾಗೆ ಪೆಟ್ಟು ಕೊಡೋಣ' CM](https://etvbharatimages.akamaized.net/etvbharat/prod-images/768-512-7692851-thumbnail-3x2-mng.jpg)
ಶಿವರಾಜ್ ಸಿಂಗ್
ಚೀನಾದಲ್ಲಿ ತಯಾರಿಸಿದ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ನಾನು ಮಧ್ಯಪ್ರದೇಶದ ಜನರಿಗೆ ಮನವಿ ಮಾಡುತ್ತೇನೆ. ನಮ್ಮ ಸೈನ್ಯವು ಅವರಿಗೆ ಸೂಕ್ತವಾದ ಉತ್ತರವನ್ನು ನೀಡುತ್ತದೆ. ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸುವ ಮೂಲಕ ನಾವು ಅವರನ್ನು ಆರ್ಥಿಕವಾಗಿ ಹೊಡೆಯೋಣ. ರಾಜ್ಯದ ಜನತೆ ಇದಕ್ಕೆ ಸಹಕರಿಸಬೇಕು ಎಂದು ಟ್ವೀಟ್ ಮೂಲಕ ಕೇಳಿಕೊಂಡಿದ್ದಾರೆ.