ನವದೆಹಲಿ:ಚೌಕಿದಾರ್ ಚೋರ್ ಹೈ ಸಂಬಂಧ ತಾವು ಸುಪ್ರೀಂಕೋರ್ಟ್ ವಿಚಾರದಲ್ಲಿ ಮಾತ್ರ ಕ್ಷಮೆ ಯಾಚನೆ ಮಾಡಿದ್ದೇನೆ ಹೊರತು, ಬಿಜೆಪಿ ವಿಚಾರದಲ್ಲಿ ಅಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನ್ಯಾಯಾಂಗ ನಿಂದನೆ ಅರ್ಜಿ ಕೋರ್ಟ್ನಲ್ಲಿದೆ. ಸುಪ್ರೀಂಕೋರ್ಟ್ನಲ್ಲಿ ನಾವು ಕ್ಷಮೆ ಕೇಳಿದ್ದೇವೆ. ನಾನು ಬಿಜೆಪಿ ಅಥವಾ ಮೋದಿ ಅವರಿಗೆ ಕ್ಷಮೆ ಕೇಳಿಲ್ಲ ಎಂದಿರುವ ರಾಹುಲ್, ಚೌಕಿದಾರ್ ಚೋರ್ ಹೈ ಎಂಬ ನಮ್ಮ ಸ್ಲೋಗನ್ ಮುಂದುವರೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ, ಜಾಗತಿಕ ಭಯೋತ್ಪಾದಕ ಪಟ್ಟಿಗೆ ಮಸೂದ್ ಅಜರ್ನನ್ನು ಸೇರ್ಪಡೆ ಮಾಡಿರುವುದು ಸ್ವಾಗತಾರ್ಹ. ಆದರೆ, ಜೈಲಿನಲ್ಲಿದ್ದ ಮಸೂದ್ ಅಜರ್ನನ್ನು ಬಿಟ್ಟು ಕಳುಹಿಸಿದವರು ಯಾರು ಅಂತಾ ಪ್ರಶ್ನಿಸಿದ್ದಾರೆ.