ಮುಂಬೈ:ಲಾಕ್‌ಡೌನ್‌ನಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ತನಗೆ ತಿಳಿದಿದೆ. ಮಾರಣಾಂತಿಕ ಕೊರೊನಾ ವೈರಸ್ನಿಂದಾಗಿ ನನ್ನ ಜನರು ತೊಂದರೆ ಒಳಗಾಗಲು ಬಿಡುವುದಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಶಿವಸೇನಾ ಮುಖವಾಣಿ 'ಸಾಮ್ನಾ'ದ ಕಾರ್ಯನಿರ್ವಾಹಕ ಸಂಪಾದಕ ಸಂಜಯ್ ರಾವತ್ ಅವರಿಗೆ ನೀಡಿದ ಸಂದರ್ಶನದ ವಿಡಿಯೋ ತುಣುಕನ್ನು ಟ್ವಿಟರ್ನಲ್ಲಿ ರಾವತ್ ಹಂಚಿಕೊಂಡಿದ್ದಾರೆ.
ನಾನು ಡೊನಾಲ್ಡ್ ಟ್ರಂಪ್ ಅಲ್ಲ. ನನ್ನ ಜನರು ಬಳಲುತ್ತಿರುವುದನ್ನು ನಾನು ನೋಡಿ ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂಬುದು ಈ ಸಂದರ್ಶನ ಟೀಸರ್ನ ಭಾಗವಾಗಿದೆ. ಉದ್ಧವ್ ಠಾಕ್ರೆ ಜನ್ಮದಿನದ ಪ್ರಯುಕ್ತ ಜುಲೈ 25, 26 ಹಾಗೂ 27ರಂದು ಸಾಮ್ನಾದಲ್ಲಿ ಸಂದರ್ಶನ ಪೂರ್ಣ ವಿವರವನ್ನು ಪ್ರಕಟಿಸಲು ಉದ್ದೇಶಿಸಲಾಗಿದೆ.
ಮುಂಬೈ ಬೀದಿಗಳಲ್ಲಿ ‘ವಡಾ ಪಾವ್’ ಮತ್ತೆ ಯಾವಾಗ ಲಭ್ಯವಾಗಲಿದೆ?, ಜನರು ಈಗ ಲಾಕ್‌ಡೌನ್‌ನಿಂದ ಬೇಸರಗೊಂಡಿದ್ದಾರೆ ಎಂದು ಪ್ರಶ್ನೆ ಕೇಳುತ್ತಾರೆ. ಈ ವೇಳೆ ಠಾಕ್ರೆ, ನಿರ್ಬಂಧಗಳನ್ನು ಸಡಿಲಿಸಲು ಪ್ರಾರಂಭಿಸಲಾಗಿದೆ ಎಂದು ಹೇಳಿದ್ದಾರೆ.