ಕರ್ನಾಟಕ

karnataka

ETV Bharat / bharat

ನನಗೆ ಸರ್ಕಾರಿ ನೌಕರಿ ಕೊಡಿಸಿ: ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ಸಹೋದರಿ ಬೇಡಿಕೆ - ನನಗೆ ಸರ್ಕಾರಿ ನೌಕರಿ ಕೊಡಿಸಿ ಎಂದು ಬೇಡಿಕೆ ಇಟ್ಟ ಉನ್ನಾವೋ ಅತ್ಯಾಚಾರ ಸಂತ್ರಸ್ಥೆಯ ಸಹೋದರಿ

ನನಗೆ ಸರ್ಕಾರಿ ಕೆಲಸವನ್ನು ಕೊಡಿಸಬೇಕು. ಈ ಕೂಡಲೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಸ್ಥಳಕ್ಕೆ ಭೇಟಿ ನೀಡಿ ತಮ್ಮ ನಿರ್ಧಾರ ಪ್ರಕಟಿಸಬೇಕು. ಶಿಘ್ರದಲ್ಲೇ ನಮಗೆ ನ್ಯಾಯ ಕೊಡಿಸಬೇಕೆಂದು ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ಸಹೋದರಿ ಆಗ್ರಹಿಸಿದ್ದಾರೆ.

ಉನ್ನಾವೋ ಅತ್ಯಾಚಾರ ಸಂತ್ರಸ್ಥೆಯ ಸಹೋದರಿ ಬೇಡಿಕೆ, Sister of Unnao rape victim
ಉನ್ನಾವೋ ಅತ್ಯಾಚಾರ ಸಂತ್ರಸ್ಥೆಯ ಸಹೋದರಿ ಬೇಡಿಕೆ

By

Published : Dec 8, 2019, 9:58 AM IST

ನವದೆಹಲಿ:ಇತ್ತೀಚೆಗೆ ಸಾವನ್ನಪ್ಪಿದ ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ಸಹೋದರಿ ಸರ್ಕಾರದ ಮುಂದೆ ಕೆಲ ಬೇಡಿಕೆಗಳನ್ನಿಟ್ಟಿದ್ದು, ತನಗೆ ಸರ್ಕಾರಿ ಕೆಲಸ ಕೊಡಿಸಬೇಕೆಂದು ಆಗ್ರಹಿಸಿದ್ದಾರೆ.

ತಕ್ಷಣವೇ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಸ್ಥಳಕ್ಕೆ ಭೇಟಿ ನೀಡಿ ತಮ್ಮ ನಿರ್ಧಾರ ಪ್ರಕಟಿಸಬೇಕು. ನಮ್ಮಿಂದ ಕೋರ್ಟ್​-ಕಚೇರಿಯೆಂದು ಅಲೆದಾಡಲು ಸಾಧ್ಯವಿಲ್ಲ. ನಮ್ಮಲ್ಲಿ ಅಷ್ಟೊಂದು ಹಣವೂ ಇಲ್ಲ. ಶಿಘ್ರದಲ್ಲೇ ನಮಗೆ ನ್ಯಾಯ ಕೊಡಿಸಬೇಕೆಂದು ಆಗ್ರಹಿಸಿದರು.

ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ಸಹೋದರಿ

ಅಲ್ಲದೆ ನನಗೆ ಸರ್ಕಾರಿ ಕೆಲಸ ಕೊಡಿಸಬೇಕೆಂದು ಅತ್ಯಾಚಾರ ಸಂತ್ರಸ್ತೆಯ ಸಹೋದರಿ ಬೇಡಿಕೆ ಇಟ್ಟಿದ್ದಾರೆ.

For All Latest Updates

ABOUT THE AUTHOR

...view details