ನವದೆಹಲಿ:ಇಂದು ಜಗತ್ತು ತನ್ನ ನಂಬಿಕೆಯನ್ನು ಮಲೇರಿಯಾ ನಿರೋಧಕ ಔಷಧ ಹೈಡ್ರಾಕ್ಸಿಕ್ಲೋರೋಕ್ವಿನ್ ಮೇಲೆ ಇರಿಸಿದೆ. ಅಮೆರಿಕ ಮತ್ತು ಬ್ರೆಜಿಲ್ ಸೇರಿದಂತೆ 30 ದೇಶಗಳು ಭಾರತವನ್ನು ಎಚ್‌ಸಿಕ್ಯು ಔಷಧ ಸಹಾಯಕ್ಕಾಗಿ ಯಾಚಿಸುತ್ತಿವೆ. ಆದರೆ, ಭಾರತದಲ್ಲಿ ಹೇರಳವಾಗಿ ಎಚ್‌ಸಿಕ್ಯು ಯಾಕೆ ಇದೆ, ಕೊರೋನಾ ವೈರಸ್ ನಾವೆಲ್ ವಿರುದ್ಧ ಇದು ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿದೆ? ನಮ್ಮ ಪ್ರಸ್ತುತ ಉತ್ಪಾದನೆಯು ಅಂತಾರಾಷ್ಟ್ರೀಯ ಮತ್ತು ದೇಶೀಯ ಅಗತ್ಯಗಳಿಗೆ ಸಾಕಾಗುತ್ತದೆಯೇ? ಕೊವಿಡ್ - 19 ಕ್ಕೆ ಚಿಕಿತ್ಸೆ ನೀಡಲು ಮಲೇರಿಯಾ ನಿರೋಧಕ ಔಷಧವನ್ನು ಬೇರೆ ಯಾವುದೇ ದೇಶ ಪ್ರಯೋಗಿಸುತ್ತಿದೆಯೇ? ಈಗ ಸಾಂಕ್ರಾಮಿಕ ರೋಗವು ಪ್ರಪಂಚವನ್ನು ತನ್ನ ಸ್ವಾಧೀನಪಡಿಸಿಕೊಳ್ಳುತ್ತಿದ್ದಂತೆ, ಹಲವಾರು ದೇಶಗಳು ಭಾರತದ ಕಡೆ ನೋಡುತ್ತಿವೆ.
ವಿಶ್ವಾದ್ಯಂತ ಕೋಟ್ಯಂತರ ಜೀವಗಳನ್ನು ಬಲಿ ಪಡೆದ 1918 ರ ಸ್ಪ್ಯಾನಿಷ್ ಫ್ಲೂ ನಂತರ, ಮಲೇರಿಯಾ ರೂಪದಲ್ಲಿ ಮತ್ತೊಂದು ಸಾಂಕ್ರಾಮಿಕ ರೋಗವು 1928 ರಿಂದ ಜಗತ್ತಿನ ರಾಷ್ಟ್ರಗಳ ಮೇಲೆ ಆಕ್ರಮಣ ಮಾಡಲು ಪ್ರಾರಂಭಿಸಿದೆ. ದಕ್ಷಿಣ ಅಮೆರಿಕದಲ್ಲಿನ ಮರ ಪ್ರಭೇದವಾದ ಸಿಂಚೋನಾ ಅಫಿಷಿನಾಲಿಸ್‌ನ ತೊಗಟೆಯನ್ನು ಈ ಕಾಯಿಲೆಗೆ ಚಿಕಿತ್ಸೆ ನೀಡಲು ಬಳಸಲಾಯಿತು. ಈ ತೊಗಟೆ ಕ್ವಿನೈನ್ ಎಂಬ ಔಷಧದ ಮೂಲ ದ್ರವ್ಯವಾಗಿದೆ.
1930 ರ ಹೊತ್ತಿಗೆ ಮಲೇರಿಯಾ ಹಲವಾರು ದೇಶಗಳಿಗೆ ಹರಡಲು ಪ್ರಾರಂಭಿಸುತ್ತಿದ್ದಂತೆ, ಈ ಔಷಧವನ್ನು ದೊಡ್ಡ ಪ್ರಮಾಣದಲ್ಲಿ ತಯಾರಿಸಲಾಗುತ್ತಿತ್ತು. ಇದನ್ನು ಕ್ಲೋರೊಕ್ವಿನ್ ಎಂದು ಮರುನಾಮಕರಣ ಮಾಡಲಾಯಿತು. ಆದರೆ, ಕ್ಲೋರೋಕ್ವಿನ್‍ನ ಹಲವಾರು ಅಡ್ಡಪರಿಣಾಮಗಳನ್ನು ವೈದ್ಯರು ಗಮನಿಸಿದರು. 1950 ರಲ್ಲಿ, ಕ್ಲೋರೋಕ್ವಿನ್ ಔಷಧವನ್ನು ಹೈಡ್ರಾಕ್ಸಿಕ್ಲೋರೋಕ್ವಿನ್ ಎಂಬ ಔಷಧಿಯನ್ನಾಗಿ ರೂಪಿಸಲು ಮತ್ತಷ್ಟು ಮಾರ್ಪಾಡು ಮಾಡಲಾಯಿತು. ಪ್ರಸ್ತುತ, ಎಚ್‌ಸಿಕ್ಯು ಔಷಧಿಯನ್ನು ಮಲೇರಿಯಾ, ಸಂಧಿವಾತ ಮತ್ತು ಕೆಲವು ಸ್ವಯಂ ನಿರೋಧಕ ಹೊಂದಿರುವ ಕಾಯಿಲೆಗಳಿಗೆ ಬಳಸಲಾಗುತ್ತಿದೆ.
ಈಗ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಮಲೇರಿಯಾ ನಿಯಂತ್ರಣದಲ್ಲಿ ಇದೆ. ಅದಕ್ಕಾಗಿಯೇ ಅವರು 1980 ರಿಂದ ಎಚ್‌ಸಿಕ್ಯು ಉತ್ಪಾದನೆಯನ್ನು ನಿಲ್ಲಿಸಿದ್ದಾರೆ. ಬೆಲೆ ಮಿತವಾಗಿರುವುದರಿಂದ ಎಚ್‌ಸಿಕ್ಯು ಮಾರಾಟದಲ್ಲಿ ಫಾರ್ಮಾ ಉದ್ಯಮವು ಕಡಿಮೆ ಲಾಭಾಂಶವನ್ನು ಹೊಂದಿದೆ. ಇದರ ಪರಿಣಾಮವಾಗಿ, ಯುಎಸ್, ಯುಕೆ ಮತ್ತು ಫ್ರಾನ್ಸ್ ಆಮದನ್ನು ಮಾತ್ರ ಅವಲಂಬಿಸಿವೆ. ಅಭಿವೃದ್ಧಿ ಹೊಂದುತ್ತಿರುವ ಮತ್ತು ಅಭಿವೃದ್ಧಿಯಾಗದ ರಾಷ್ಟ್ರಗಳಲ್ಲಿ ಮಲೇರಿಯಾ ಪ್ರಕರಣಗಳ ಸಂಖ್ಯೆ ಹೆಚ್ಚು. ಹೆಚ್ಚಿನ ಗ್ರಾಮೀಣ ಜನಸಂಖ್ಯೆ ಹೊಂದಿರುವ ದೇಶಗಳಲ್ಲಿ ಮಲೇರಿಯಾ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ.