ಕರ್ನಾಟಕ

karnataka

ETV Bharat / bharat

ಪ್ರವಾಹ ಪರಿಹಾರ ನೀಡದೆ ಹೇಗೆ ಓಟ್​ ಕೇಳಲು ಬಂದ್ರಿ : ಓವೈಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಜನ - ಜಿಹೆಚ್​​ಎಂಸಿ ಚುನಾವಣೆ-2020

ಹೈದರಾಬಾದ್ ನಗರದ ಜಮ್​ಭಾಗ್ ವಾರ್ಡ್​ನಲ್ಲಿ ಮತ ಯಾಚನೆಗೆ ತೆರಳಿದ ಸಂಸದ ಅಸಾದುದ್ದೀನ್ ಓವೈಸಿ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Asaduddin Owaisi election Campagin
ಓವೈಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಜನ

By

Published : Nov 23, 2020, 5:54 PM IST

ಹೈದರಾಬಾದ್​ :ನಗರದ ಜಂಬಾಗ್ ಪ್ರದೇಶದಲ್ಲಿ ಪಕ್ಷದ ಅಭ್ಯರ್ಥಿ ಪರ ಮತಯಾಚನೆಗೆ ತೆರಳಿದ ಎಐಎಂಐಎಂ ಪಕ್ಷದ ಮುಖ್ಯಸ್ಥ ಮತ್ತು ಸಂಸದ ಅಸಾದುದ್ದೀನ್ ಓವೈಸಿ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಓವೈಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಜನ

ಜಿಹೆಚ್​ಎಂಸಿ ಚುನಾವಣೆಯಲ್ಲಿ ಜಮ್​ಭಾಗ್ ವಾರ್ಡ್​ನ ಎಐಎಂಐಎಂ ಪಕ್ಷದ ಅಭ್ಯರ್ಥಿ ರವೀಂದರ್​ ಪರ ಮತಯಾಚನೆಗೆ ತೆರಳಿದಾಗ ಓವೈಸಿಯನ್ನು ತಡೆದ ಜನ, ನಮಗೆ ಇನ್ನೂ ಪ್ರವಾಹ ಪರಿಹಾರ ಸಿಕ್ಕಿಲ್ಲ. ಸಂಕಷ್ಟದ ಸಮಯದಲ್ಲಿ ಯಾವುದೇ ಸಹಾಯ ದೊರೆಯಲಿಲ್ಲ. ಈಗ ನೀವು ಜಿಹೆಚ್​ಎಂಸಿ ಚುನಾವಣೆ ಬಂದಾಗ ಹೇಗೆ ಮತ ಕೇಳಲು ಬಂದಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಓವೈಸಿ ಸ್ಥಳದಿಂದ ತೆರಳಿದ್ಧಾರೆ.

ಪ್ರವಾಹದಿಂದ ಹಾನಿಯಾದ ಮನೆಗಳಿಗೆ 10 ಸಾವಿರ ರೂ. ಸಂಪೂರ್ಣ ಕುಸಿದಿರುವ ಮನೆಗಳಿಗೆ 1 ಲಕ್ಷ ರೂ. ಮತ್ತು ಭಾಗಶಃ ಹಾನಿಯಾದ ಮನೆಗಳಿಗೆ 50 ಸಾವಿರ ರೂ. ಪರಿಹಾರವನ್ನು ಸರ್ಕಾರ ನೀಡುತ್ತಿದೆ.

ABOUT THE AUTHOR

...view details