ಹೈದರಾಬಾದ್ (ತೆಲಂಗಾಣ): ಇಲ್ಲಿನ 1 ವರ್ಷ 9 ತಿಂಗಳು ವಯಸ್ಸಿನ ಆದಿತ್ ವಿಶ್ವನಾಥ ಗೌರಿಶೆಟ್ಟಿ ಎಂಬ ಪುಟ್ಟ ಬಾಲಕ 'ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್' ಮತ್ತು ಇತರ ನಾಲ್ಕು ದಾಖಲೆ ಪುಸ್ತಕಗಳಲ್ಲಿ ಸ್ಥಾನ ಪಡೆದುಕೊಂಡಿದ್ದಾನೆ.
ಈ ಚಿಕ್ಕ ವಯಸ್ಸಿನಲ್ಲಿ ಆದಿತ್ ವಿಶ್ವನಾಥ ಗೌರಿಶೆಟ್ಟಿ, ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ತೆಲುಗು ಬುಕ್ ಆಫ್ ರೆಕಾರ್ಡ್ಸ್ ಮತ್ತು ಸ್ಮರಣ ಕೌಶಲ್ಯಕ್ಕಾಗಿ ಇನ್ನೂ ಎರಡು ರಾಷ್ಟ್ರೀಯ ದಾಖಲೆಗಳನ್ನು ಮಾಡಿದ್ದಾನೆ.