ಹೈದರಾಬಾದ್: ಸುದೀರ್ಘ ವಿರಾಮದ ಬಳಿಕ ಹೈದರಾಬಾದ್ ಸಿಟಿಯಿಂದ ಕರ್ನಾಟಕ ಮತ್ತು ಮಹಾರಾಷ್ಟ್ರಕ್ಕೆ ಬಸ್ ಸೇವೆ ಆರಂಭವಾಗುತ್ತಿದೆ.
ಇಂದಿನಿಂದ ಹೈದರಾಬಾದ್ ಟು ಕರ್ನಾಟಕ ಬಸ್ ಸೇವೆ ಪ್ರಾರಂಭ ಹೈದರಾಬಾದ್ನ ಪ್ರಮುಖ ನಗರಗಳಲ್ಲಿ ಕೇವಲ ಶೇ. 25ರಷ್ಟು ಮಾತ್ರ ಇಂದಿನಿಂದ ನಗರ ಸಂಚಾರ ಬಸ್ ವ್ಯವಸ್ಥೆ ಪ್ರಾರಂಭವಾಗಲಿದೆ. ಅದರಂತೆ ಅಂತಾರಾಜ್ಯಗಳಾದ ಕರ್ನಾಟಕ ಮತ್ತು ಮಹಾರಾಷ್ಟ್ರಕ್ಕೂ ಸಹ ಬಸ್ ಸಂಚಾರ ಆರಂಭಗೊಳ್ಳಲಿದೆ ಎಂದು ತೆಲಂಗಾಣ ರಾಜ್ಯ ಸಾರಿಗೆ ಸಚಿವ ಪುವ್ವಾಡ ಅಜಯ್ ಕುಮಾರ್ ಹೇಳಿದ್ದಾರೆ.
ಗುರುವಾರ ಬಸ್ ಆರಂಭ ಕುರಿತು ಸಿಎಂ ಕೆಸಿಆರ್ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಸಚಿವ ಅಜಯ್ ಕುಮಾರ್, ನಗರದಿಂದ ಇತರ ಪ್ರಾಂತಗಳಿಗೆ 150 ಬಸ್ಗಳು ಬುಧವಾರದಿಂದ ಪ್ರಾರಂಭವಾಗಿವೆ. ಇಂದಿನಿಂದ 600-700 ಬಸ್ಗಳನ್ನು ಬಿಡಲು ತೀರ್ಮಾನಿಸಿದ್ದೇವೆ. ಹೈದರಾಬಾದ್ ವ್ಯಾಪ್ತಿಯ 29 ಡಿಪೋಗಳಿಂದ ಪ್ರಮುಖ ಮಾರ್ಗಗಳಲ್ಲಿ ಬಸ್ ಸೇವೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಆದೇಶಿಸಲಾಗಿದೆ. ಆಯಾ ನಗರದ ಬೇಡಿಕೆ ಆಧಾರದ ಮೇಲೆ ಬಸ್ಗಳ ಸಂಖ್ಯೆ ಹೆಚ್ಚಿಸುವುದರ ಬಗ್ಗೆ ಪರಿಶೀಲಿಸಲಾಗುವುದೆಂದು ತಿಳಿಸಿದ್ದಾರೆ.
ಬಸ್ಗಳಲ್ಲಿ ಪ್ರಯಾಣಿಕರು ಕೊರೊನಾ ನಿಯಮ ಪಾಲಿಸಲೇಬೇಕು. ಬಸ್ ಸಂಚಾರ ಕುರಿತು ಆಂಧ್ರ ಪ್ರದೇಶ ಜೊತೆ ಒಪ್ಪಂದ ಅಂತಿಮವಾಗಿಲ್ಲ. ಹೀಗಾಗಿ ಸದ್ಯ ಆಂಧ್ರ ಪ್ರದೇಶಕ್ಕೆ ಬಸ್ ಸಂಚಾರ ವ್ಯವಸ್ಥೆ ಇಲ್ಲವೆಂದು ಸಚಿವ ಅಜಯ್ ಕುಮಾರ್ ಹೇಳಿದ್ದಾರೆ.